×
Ad

'ಜನರ ಬಳಿ ಇರುವ ಕೊನೆಯ ಪೈಸೆಯನ್ನೂ ದೋಚುವುದು ಬಿಜೆಪಿಯ ಗುರಿ': ಕಾಂಗ್ರೆಸ್

Update: 2022-07-18 22:59 IST

ಬೆಂಗಳೂರು: 'ವಿದ್ಯುತ್ ಉಳಿತಾಯಕ್ಕೆ, ನೈಸರ್ಗಿಕ ಇಂಧನ ಬಳಕೆಗೆ, ಇಂಧನ ತೈಲಗಳ ಬಳಕೆ ತಗ್ಗಿಸಲು ಸರ್ಕಾರದ ಪ್ರೋತ್ಸಾಹ ನೀಡಬೇಕಿತ್ತು, ಆದರೆ ಸೋಲಾರ್ ಉಪಕರಣಗಳಿಗೆ 12%, LED ಬಲ್ಬ್‌ಗಳಿಗೆ 18%, ವಿದ್ಯುತ್ ಚಾಲಿತ ವಾಹನಗಳಿಗೆ 5% ತೆರಿಗೆ ವಿಧಿಸಿ ದೇಶದ ಹಿತಾಸಕ್ತಿಗೆ  ಬಿಜೆಪಿ ಸರ್ಕಾರ ಮಾರಕವಾಗಿದೆ' ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 

'ಜನರ ಬಳಿ ಇರುವ ಕೊನೆಯ ಪೈಸೆಯನ್ನೂ ದೋಚುವುದು ಬಿಜೆಪಿಯ ಗುರಿ! ಬ್ಯಾಂಕಿನಲ್ಲಿ ಹಣ ಹಾಕಿದರೂ ಶುಲ್ಕ, ಹಣ ತೆಗೆದರೂ ಶುಲ್ಕ, ಚೆಕ್ ಬುಕ್‌ಗಳ ಮೇಲೂ 18% ತೆರಿಗೆ. ಬ್ಯಾಂಕಿನಲ್ಲಿ ಹಣವಿಟ್ಟರೆ ಸುರಕ್ಷಿತ ಎಂಬ ಭಾವನೆ ಜನರಲ್ಲಿತ್ತು, ಈಗ ಬ್ಯಾಂಕ್ ಎಂದರೆ ಸುಲಿಗೆ ಕೇಂದ್ರ ಎಂಬಂತಾಗಿದೆ. ಇದೇ ಬಿಜೆಪಿಯ ಅಚ್ಛೆ ದಿನಗಳ ಸೌಭಾಗ್ಯ' ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News