×
Ad

PM ಆವಾಸ್ ಯೋಜನೆಯ ಅನುದಾನದಲ್ಲೂ ರಾಜ್ಯಕ್ಕೆ ಅನ್ಯಾಯ: ದಿನೇಶ್ ಗುಂಡೂರಾವ್ ವಾಗ್ದಾಳಿ

Update: 2022-07-19 10:41 IST

ಬೆಂಗಳೂರು: PM ಆವಾಸ್ ಯೋಜನೆಯಲ್ಲಿ‌ ನೆರೆಯ ಆಂಧ್ರ, ತಮಿಳುನಾಡು‌, ಮಹಾರಾಷ್ಟ್ರಗಳಿಗೆ ಅನುದಾನ ಹೆಚ್ಚಳವಾಗಿದೆ. ಆದರೆ ಕರ್ನಾಟಕಕ್ಕೆ ಅರ್ಧದಷ್ಟು ಅನುದಾನ ಕಡಿತವಾಗಿದೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಈ ತಾರತಮ್ಯ? ರಾಜ್ಯದ ಜನರು ಬಿಜೆಪಿಗೆ ಓಟು ಹಾಕಿದ ತಪ್ಪಿಗೆ ಈ ಶಿಕ್ಷೆಯೇ? ಅಥವಾ ರಾಜ್ಯದ‌ ಜನ ಹೇಗಿದ್ದರೂ ಕೇಳುವುದಿಲ್ಲ ಎಂಬ ಉದಾಸೀನವೇ?' ಎಂದು ಕಿಡಿಗಾರಿದ್ದಾರೆ. 

'GST ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ, GST ಬಾಕಿಯಲ್ಲೂ ಅನ್ಯಾಯ, 5495 ಕೋಟಿ ವಿಶೇಷ ಅನುದಾನದಲ್ಲೂ ರಾಜ್ಯಕ್ಕೆ ಅನ್ಯಾಯ, ಈಗ PM ಆವಾಸ್ ಯೋಜನೆಯ ಅನುದಾನದಲ್ಲೂ ಅನ್ಯಾಯ. ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿದ ರಾಜ್ಯದ ಜನರಿಗೆ ಇದೇನಾ ಪ್ರತಿಫಲ?  ಡಬಲ್ ಇಂಜೀನ್ ಸರ್ಕಾರದ ಸ್ವರ್ಗಸೃಷ್ಟಿಯೆಂದರೆ ರಾಜ್ಯಕ್ಕೆ ಅನ್ಯಾಯವೆಸಗುವುದೆ?' ಎಂದು ಬಿಜೆಪಿ ಅನ್ನು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News