×
Ad

ಶಾಸಕರ ಖರೀದಿ ವಹಿವಾಟಿನ ಮೇಲೆ GST ವಿಧಿಸುವುದಾದರೆ ಸರ್ಕಾರದ ಆದಾಯ ಸಮಸ್ಯೆಗೆ ಪರಿಹಾರ: ಪ್ರಿಯಾಂಕ್ ಖರ್ಗೆ

Update: 2022-07-19 15:06 IST

ಬೆಂಗಳೂರು: ದೈನಂದಿನ ಬಳಕೆ ಮಾಡುವ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ತೆರಿಗೆ ಹೇರಿದ್ದಕ್ಕೆ ಮಾಜಿ ಸಚಿವ, ಚಿತ್ತಾಪುರ ಮತ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಟ್ವೀಟ್ ಮಾಡಿರುವ ಅವರು, ಕೇಂದ್ರ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

''ಮೋದಿಜಿಯವರು ಶಾಸಕರ ಖರೀದಿ ವಹಿವಾಟಿನ ಮೇಲೆ ಜಿಎಸ್‌ಟಿಯನ್ನು ವಿಧಿಸುವುದಾದರೆ ಸರ್ಕಾರದ ಎಲ್ಲಾ ಆದಾಯ ಸಮಸ್ಯೆಗಳನ್ನೂ ಪರಿಹರಿಸಬಹುದು'' ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಇನ್ನು ಇನ್ನೋರ್ವ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟ್ವಿಟ್ ಮಾಡಿ, 'GST ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ, GST ಬಾಕಿಯಲ್ಲೂ ಅನ್ಯಾಯ, 5495 ಕೋಟಿ ವಿಶೇಷ ಅನುದಾನದಲ್ಲೂ ರಾಜ್ಯಕ್ಕೆ ಅನ್ಯಾಯ, ಈಗ PM ಆವಾಸ್ ಯೋಜನೆಯ ಅನುದಾನದಲ್ಲೂ ಅನ್ಯಾಯ. ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿದ ರಾಜ್ಯದ ಜನರಿಗೆ ಇದೇನಾ ಪ್ರತಿಫಲ?  ಡಬಲ್ ಇಂಜೀನ್ ಸರ್ಕಾರದ ಸ್ವರ್ಗಸೃಷ್ಟಿಯೆಂದರೆ ರಾಜ್ಯಕ್ಕೆ ಅನ್ಯಾಯವೆಸಗುವುದೆ?' ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News