×
Ad

ಕಾಂಗ್ರೆಸ್‌ ಸರ್ಕಾರದ ಕುರಿತ ಪತ್ರಿಕೆಯ ವರದಿಗೆ ಬೊಮ್ಮಾಯಿ ಫೋಟೋ ಹಾಕಿದ ಡಿಕೆಶಿ ಬಣ: ಬಿಜೆಪಿ ಆರೋಪ

Update: 2022-07-19 16:04 IST

ಬೆಂಗಳೂರು: '2017 ರಲ್ಲಿ ಕಾಂಗ್ರೆಸ್‌ ಸರ್ಕಾರದ ಕುರಿತು ಪತ್ರಿಕೆಗಳು ಪ್ರಕಟಿಸಿದ್ದ ವರದಿಗೆ ಬೊಮ್ಮಾಯಿ ಅವರ ಫೋಟೋ ಹಾಕಿ ಡಿಕೆಶಿ ಬಣ ವೈರಲ್‌ ಮಾಡುತ್ತಿದೆ' ಎಂದು ಬಿಜೆಪಿ ಆರೋಪಿಸಿದೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಗಾರಿದೆ. 

'ಕಾಂಗ್ರೆಸ್ ಅವಧಿಯಲ್ಲಿ ನಡೆದ ಭ್ರಷ್ಟಾಚಾರದ ಜಾತ್ರೆಯನ್ನು ಕಾಂಗ್ರೆಸ್‌ ಕಾರ್ಯಕರ್ತರೇ ಮುನ್ನಲೆಗೆ ತಂದಿರುವುದು ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲೇ?'ಎಂದು ಪ್ರಶ್ನೆ ಮಾಡಿದೆ. 

ಇದನ್ನೂ ಓದಿ... ಶಾಸಕರ ಖರೀದಿ ವಹಿವಾಟಿನ ಮೇಲೆ GST ವಿಧಿಸುವುದಾದರೆ ಸರ್ಕಾರದ ಆದಾಯ ಸಮಸ್ಯೆಗೆ ಪರಿಹಾರ: ಪ್ರಿಯಾಂಕ್ ಖರ್ಗೆ

'ನಿರ್ಲಜ್ಜತನದ ಮೂಲಕ‌ ಸಾರ್ವಜನಿಕರಿಗೆ ಕಾಂಗ್ರೆಸ್ ತಪ್ಪು ಮಾಹಿತಿ ಹಂಚುತ್ತಿದೆ. "ಲಂಚಗುಳಿತನ : ರಾಜ್ಯಕ್ಕೆ ಅಗ್ರಸ್ಥಾನ" ಎಂದು ಪ್ರಕಟವಾದ ಮಾಧ್ಯಮ ವರದಿಯ ದಿನಾಂಕವನ್ನೂ ಓದಲಾರದಷ್ಟು ದೊಡ್ಡ ದೃಷ್ಟಿದೋಷ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆಯೇ?' ಎಂದು ಹೇಳಿದೆ.

'ಸರ್ಕಾರಿ ಸೇವೆ ಪಡೆಯಲು ಲಂಚಕೊಡುವ ಪದ್ಧತಿ ಪರಿಚಯಿಸಿದ್ದೇ ಕಾಂಗ್ರೆಸ್. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಲಂಚದ ಪ್ರಮಾಣ 65% ಹೆಚ್ಚಳವಾಗಿತ್ತು ಎಂದು ಸಮೀಕ್ಷೆ ಬಹಿರಂಗ ಪಡಿಸಿತ್ತು. ಅಂದರೆ ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್‌ ಸರ್ಕಾರ 65% ಸರ್ಕಾರವಾಗಿತ್ತೇ?' ಎಂದು ಬಿಜೆಪಿ ಕುಟುಕಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News