×
Ad

ಹಾಸನ: ರಸ್ತೆಗೆ ಉರುಳಿದ ಬೃಹತ್ ಮರ, ಕಾರು-ಬೈಕ್ ಜಖಂ

Update: 2022-07-19 18:29 IST

ಹಾಸನ: ನಗರದ ಶಂಕರಮಠ ದೇವಸ್ಥಾನದ ಮುಂದೆ ಇದ್ದ ಬೃಹತ್ ಮರವೊಂದು ಧರೆಗೆ ಉರುಳಿದ್ದು, ಈ ವೇಳೆ ರಸ್ತೆಯ ಬದಿ ನಿಲ್ಲಿಸಲಾಗಿದ್ದ ಕಾರು ಬೈಕ್ ಗಳು ಜಖಂಗೊಂಡ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿರುವುದಿಲ್ಲ ಎಂದು ತಿಳದು ಬಂದಿದೆ.

ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಬಾರಿ ಮಳೆಗೆ ಈಗಾಗಲೇ ಹಾಸನ ಕ್ಷೇತ್ರದಲ್ಲೆ ಅದೆಷ್ಟೊ ಮನೆಗಳು ಕುಸಿದು ನಷ್ಟವಾಗಿದ್ದು, ಭೂಮಿಯು ನೀರಿನಲ್ಲಿ ತೇವವಾಗಿರುವುದರಿಂದ ಹಳೆಯ ಕಾಲದ ಮರಗಳು ಕೂಡ ಧರೆಗೆ ಕುಸಿಯುತ್ತಿದೆ. ಶಂಕರ ಮಠದ ರಸ್ತೆ, ದೇವಸ್ಥಾನದ ಮುಂಬಾಗ ಇದ್ದ ಮರವು ಕೆಳಗೆ ಬಿದ್ದಿದ್ದು, ರಸ್ತೆ ಬದಿ ಅನೇಕ ವಾಹನಗಳನ್ನು ಪಾರ್ಕಿಂಗ್ ಮಾಡಲಾಗಿದ್ದರಿಂದ ಕೆಲ ವಾಹನಗಳ ಮೇಲೆಯೆ ಮರ ಬಿದ್ದು, ಜಖಂಗೊಂಡಿದೆ. ಹೆಚ್ಚಿನ ವಾಹನಗಳು ಇಲ್ಲಿ ಓಡಾಡುತ್ತಿದ್ದು, ಹಗಲು ಹೊತು ಮರ ರಸ್ತೆ ಮಧ್ಯೆಯೇ ಬಿದ್ದಿದ್ದರಿಂದ ಆಗುತ್ತಿದ್ದ ಹೆಚ್ಚಿನ ಪ್ರಾಣಾಪಯ ತಪ್ಪಿದಂತಾಗಿದೆ. ಮರ ಬಿದ್ದ ಎದುರೆ ಮತ್ತೊಂದ ಹಳೆಯ ಕಾಲದ ಮರವನ್ನು ಇದೆ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರವು ಕೆಲಸ ಮಾಡಿದರು. ರಸ್ತೆ ಪೂರ್ಣ ಮರ ಬಿದ್ದಿದ್ದರಿಂದ ಕಾಮಗಾರಿಗೆ ಈ ರಸ್ತೆಯನ್ನು ಕೆಲಸ ಸಮಯಗಳ ಕಾಲ ಬಂದ್ ಮಾಡಲಾಗಿತ್ತು. ಈ ಮಾರ್ಗದಲ್ಲಿ ಬರುವ ವಾಹನ ಚಾಲಕರು ಸಾಲುಗಟ್ಟಲೆ ನಿಲ್ಲ ಬೇಕಾಯಿತು. ನಂತರದಲ್ಲಿ ಬದಲಿ ರಸ್ತೆ ಮೂಲಕ ಕಳುಹಿಸಿದರು. 

ವಿಷಯ ತಿಳಿದ ನಗರಸಭೆ ಅಧ್ಯಕ್ಷ ಮೋಹನ್ ಅವರು ಸ್ಥಳಕ್ಕಾಗಮಿಸಿ ವೀಕ್ಷಣೆ ಮಾಡಿದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಂಕರಮಠ ರಸ್ತೆ, ಗಣಪತಿ ದೇವಸ್ಥಾನದ ಮುಂಬಾಗ ಹಳೆ ಕಾಲದ ಮರವೊಂದು ರಸ್ತೆ ಮೇಲೆ ಬಿದ್ದುದ್ದು, ಹಳೆ ಕಾಲದ ಮರಗಳನ್ನೆಲ್ಲಾ ತೆರವು ಮಾಡಲು ಅರಣ್ಯ ಇಲಾಖೆಗೆ ಅನೇಕ ಬಾರಿ ಹೇಳಿದರೂ ಸ್ಪಂದಿಸದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ದೂರಿದರು. ನಗರಸಭೆ ವ್ಯಾಪ್ತಿಯಲ್ಲಿ ಅನೇಕ ಮರವು ಮಳೆಯಿಂದ ಶಿಥಿಲಗೊಂಡು ಬೀಳವ ಸ್ಥಿತಿಯಲ್ಲಿದೆ. ಇಂತಹ ಮರಗಳ ತೆರವು ಮಾಡುವಂತೆ ಅನೇಕ ಬಾರಿ ಮನವಿ ಮಾಡಲಾಗಿದ್ದರೂ ಗಮನ ನೀಡಿರುವುದಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಕೂಡಲೇ ಜೀವವಿಲ್ಲದ ಹಳೆಯ ಮರಗಳನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದರು.

ಇದೆ ವೇಳೆ ನಗರಸಭೆ ಸದಸ್ಯ ಸಂತೋಷ್ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News