ರಾಜ್ಯ ಸರಕಾರ 2021ರಲ್ಲಿಯೇ ಉಳಿದುಬಿಟ್ಟಿದೆ, ‘ಟೇಕ್ ಆಫ್' ಆಗಿಯೇ ಇಲ್ಲ: ಸಿದ್ದರಾಮಯ್ಯ ವ್ಯಂಗ್ಯ
Update: 2022-07-19 20:20 IST
ಬೆಂಗಳೂರು: 'ರಾಜ್ಯ ಸರಕಾರ, 2021ರಲ್ಲಿಯೇ ಉಳಿದುಬಿಟ್ಟಿದೆ ‘ಟೇಕ್ ಆಫ್' ಆಗಿಯೇ ಇಲ್ಲ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ನಾಡಹಬ್ಬ ಮೈಸೂರು ಮಹೋತ್ಸವ ಆಚರಣೆ ಸಂಬಂಧ ನಡೆದ ಉನ್ನತಮಟ್ಟದ ಸಮಿತಿ ಸಭೆಯ ಕಾರ್ಯಸೂಚಿ ಪತ್ರಿಕೆಯಲ್ಲಿ 19/7/2022ರ ಬದಲಾಗಿ ‘19/7/2021’ ಎಂದು ಮುದ್ರಿಸಲಾಗಿದೆ. ಈ ಆಹ್ವಾನ ಪತ್ರಿಕೆಯನ್ನು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ''ರಾಜ್ಯ ಬಿಜೆಪಿ ಸರಕಾರ, 2021ರಲ್ಲಿಯೇ ಉಳಿದುಬಿಟ್ಟಿದೆ ‘ಟೇಕ್ ಆಫ್' ಆಗಿಯೇ ಇಲ್ಲ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ?'' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
.@BJP4Karnataka ಸರ್ಕಾರ
— Siddaramaiah (@siddaramaiah) July 19, 2022
2021ರಲ್ಲಿಯೇ ಉಳಿದುಬಿಟ್ಟಿದೆ
'ಟೇಕ್ ಆಪ್'
ಆಗಿಯೇ ಇಲ್ಲ ಎನ್ನುವುದಕ್ಕೆ
ಬೇರೆ ಸಾಕ್ಷಿ ಬೇಕೇ? pic.twitter.com/vfPbl79iim