'ಮೂಡಿಗೆರೆ ಕ್ಷೇತ್ರದಿಂದ ಹೊಸ ಅಭ್ಯರ್ಥಿಗೆ ಟಿಕೆಟ್ ಕೊಡಿ': ಜೆಡಿಎಸ್ ವರಿಷ್ಠರ ಭೇಟಿಗೆ ಮುಖಂಡರ ನಿರ್ಧಾರ

Update: 2022-07-19 16:40 GMT

ಚಿಕ್ಕಮಗಳೂರು, ಜು.19: ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಬೇಕು. ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ವಿಧಾನಪರಿಷತ್‍ಗೆ ಅವಕಾಶ ಕಲ್ಪಿಸಬೇಕೆಂದು ವರಿಷ್ಠರನ್ನು ಕೋರುವ ನಿರ್ಣಯವನ್ನು ಜಾತ್ಯತೀತ ಜನತಾದಳದ ಅಂಬ್ಳೆಹೋಬಳಿ ಘಟಕದ ಮುಖಂಡರು ನಡೆಸಿದ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. 

ನಗರದ ಖಾಸಗಿ ಹೋಟೆಲ್‍ವೊಂದರಲ್ಲಿ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅಂಬ್ಳೆ ಹಾಗೂ ಮೂಡಿಗೆರೆಯ ಜೆಡಿಎಸ್ ಮುಖಂಡರ ಸಭೆಯನ್ನು ಇಲ್ಲಿನ ನಗರಸಭಾ ಸದಸ್ಯ ಎ.ಸಿ.ಕುಮಾರ್ ಉದ್ಘಾಟಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮುಖಂಡರು ಈ ಬಾರಿ ಮೂಡಿಗೆರೆ ಮೀಸಲು ಕ್ಷೇತ್ರಕ್ಕೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬದಲಿಸಿ ಹೊಸ ಮುಖಕ್ಕೆ ಅವಕಾಶ ಕಲ್ಪಿಸಿ ಜೆಡಿಎಸ್ ಗೆಲುವಿಗೆ ಶ್ರಮಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ.

ಕ್ಷೇತ್ರದ ಮಾಜಿ ಶಾಸಕ ಹಾಗು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರಿಗೆ ವಯಸ್ಸಾಗಿದ್ದು, ಅವರಿಗೆ ವಿಧಾ ನಪರಿಷತ್ತಿನ ಸದಸ್ಯತ್ವ ಪಡೆಯಲು ಪಕ್ಷದ ವರಿಷ್ಟರು ನೆರವಾಗಬೇಕೆಂದು ಒತ್ತಾಯಿಸಲಾಗಿದ್ದು, ಸಭೆಯಲ್ಲಿ ತೆಗೆ ದುಕೊಂಡ ನಿರ್ಣಯವನ್ನು ವರಿಷ್ಟ ರಿಗೆ ತಲುಪಿಸಿ ಅಗತ್ಯ ಕ್ರಮ ತೆಗೆದು ಕೊಳ್ಳಲು ಮನವಿ ಮಾಡಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಪಿಸಿಎಆರ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬೈರೇಗೌಡ, ಮತ್ತಿಕೆರೆ ಗೋಪಾಲ್, ಕೆ.ಆರ್.ಪೇಟೆನಾಗೇಶ್, ಮೂಡಿಗೆರೆಯ ದೇವರಾಜ್, ಕಣ ಬೂರು ರಾಜೇಂದ್ರ, ಕೆ.ಆರ್.ಪೇಟೆ ಜಗನ್ನಾಥ್ ಸೇರಿದಂತೆ ಸುಮಾರು ಅರವತ್ತು ಮಂದಿ ಜೆಡಿಎಸ್ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News