ಬೆಂಗಳೂರಿನಿಂದ ಜೋಗ ಜಲಪಾತಕ್ಕೆ ಕೆಎಸ್ಸಾರ್ಟಿಸಿಯಿಂದ ವಾರಾಂತ್ಯದ ಟೂರ್ ಪ್ಯಾಕೇಜ್

Update: 2022-07-19 17:59 GMT

ಬೆಂಗಳೂರು, ಜು.19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ‘ಬೆಂಗಳೂರು-ಜೋಗ ಜಲಪಾತ’ ಪ್ಯಾಕೇಜ್ ಟೂರ್ ಅನ್ನು ಜು.22ರಿಂದ ಆರಂಭಿಸಿದೆ. 

ಈ ಕಾರ್ಯಚರಣೆ ಅಡಿ ವಾರಾಂತ್ಯದ ದಿನಗಳಾದ ಶುಕ್ರವಾರ ಮತ್ತು ಶನಿವಾರ ‘ನಾನ್ ಎಸಿ ಸ್ಲೀಪರ್ ಕೆಸ್ಸಾರ್ಟಿಸಿ ಬಸ್’ಗಳು ಶಿವಮೊಗ್ಗ, ಸಾಗರ ಮಾರ್ಗವಾಗಿ ಸಂಚರಿಸಲಿವೆ. ವಯಸ್ಕರಿಗೆ 2,300 ರೂ.ಗಳನ್ನು, 6 ರಿಂದ 12 ವರ್ಷದ ಮಕ್ಕಳಿಗೆ 2,100 ರೂ.ಗಳನ್ನು ಪ್ಯಾಕೇಜ್ ಟೂರ್ ದರವನ್ನು ನಿಗದಿಪಡಿಸಲಾಗಿದೆ.

ಬಸ್‍ಗಳು ಬೆಂಗಳೂರಿನಿಂದ ರಾತ್ರಿ 8:30ಕ್ಕೆ ಬಸ್ ಹೊರಡಲಿದ್ದು, ವರದಹಳ್ಳಿ, ಇಕ್ಕೇರಿ, ಕೆಳದಿ, ಸಾಗರ ಮಾರ್ಗವಾಗಿ ಮರುದಿನ ಮಧ್ಯಾಹ್ನ 1ಗಂಟೆಗೆ ಜೋಗ ಜಲಪಾತವನ್ನು ತಲುಪಲಿವೆ. ಜೋಗ್ ಜಲಪಾತದಿಂದ ಸಂಜೆ 6.15ಕ್ಕೆ ಹೊರಡಲಿದ್ದು, ಬೆಂಗಳೂರಿಗೆ ಮರುದಿನ 5 ಗಂಟೆಗೆ ತಲುಪಲಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News