ಸಾಹಿತಿಗಳ ಜೀವ ಬೆದರಿಕೆಯ ಮೇಲೆ ಕ್ರಮವಹಿಸದ ರಾಜ್ಯ ಸರಕಾರ: ಸಿಪಿಐ(ಎಂ)

Update: 2022-07-20 14:53 GMT
(ಗಣ್ಯರಿಗೆ ದುಷ್ಕರ್ಮಿಗಳಿಂದ ಬಂದಿರುವ 3ನೇ ಕೊಲೆ ಬೆದರಿಕೆ ಪತ್ರ)

ಬೆಂಗಳೂರು, ಜು.20: ರಾಜ್ಯದ ಪ್ರಗತಿಪರ, ಗಣ್ಯ ಸಾಹಿತಿಗಳಾದ ನಾಡೋಜ ಬರಗೂರು ರಾಮಚಂದ್ರಪ್ಪ, ಕುಂ.ವೀರಭದ್ರಪ್ಪ, ಬಿ.ಟಿ.ಲಲಿತಾನಾಯಕ್ ಸೇರಿದಂತೆ 64 ಜನ ಗಣ್ಯರನ್ನು ಅವಹೇಳನಕಾರಿಯಾಗಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಜೀವ ಬೆದರಿಕೆ ಪತ್ರಗಳು ಬರುತ್ತಲೇ ಇವೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ತಿಳಿಸಿದ್ದಾರೆ. 

ಆದಾಗಲೂ ಇಂತಹ ಗಣ್ಯರ ಕುರಿತ ಅವಹೇಳನಕಾರಿ ನಡೆ ಹಾಗೂ ಜೀವ ಬೆದರಿಕೆಯ ಗೂಂಡಾಗಿರಿ ರಾಜಕೀಯದ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸಿರುವುದು ಮತ್ತು ಸರಕಾರ ಈ ಕುರಿತಂತೆ ಕಠಿಣವಾಗಿ ವ್ಯವಹರಿಸದಿರುವುದು ಇಂತಹ ಕೋಮುವಾದಿ ಪುಂಡು ಪೆÇೀಕರಿಗಳ ಚಟುವಟಿಕೆಗಳು ಹೆಚ್ಚಳಗೊಳ್ಳಲು ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸರಕಾರದ ಈ ಪ್ರಾಣಾಂತಕ ಮೌನವನ್ನು ಸಿಪಿಎಂ ಪಕ್ಷ ಬಲವಾಗಿ ಖಂಡಿಸುತ್ತದೆ ಮತ್ತು ಈ ಕೂಡಲೇ ಬೆದರಿಕೆ ಪತ್ರದ ಮೂಲವನ್ನು ಭೇದಿಸಲು ಪರಿಣಾಮಕಾರಿ ತನಿಖೆಯನ್ನು ಕೈಗೊಂಡು, ಆರೋಪಿಗಳನ್ನು ಬಂಧಿಸಿ ಶಿಕ್ಷಿಸಲು ಅಗತ್ಯ ಕ್ರಮವಹಿಸಬೇಕು ಎಂದು ಬಸವರಾಜ ಒತ್ತಾಯಿಸಿದ್ದಾರೆ.

ಇಂತಹ ನಾಡಿಗಾಗಿ ದುಡಿದ ಗಣ್ಯರಿಗೆ ಜೀವ ಬೆದರಿಕೆ ಒಡ್ಡುವುದನ್ನು ತಡೆಯಲು, ಕಠಿಣ ಕ್ರಮವಹಿಸುವಂತೆ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News