ಪ್ರಧಾನಿ ನರೇಂದ್ರ ಮೋದಿ ಜನರ ಭಾವನೆಗೆ ಸ್ಪಂದಿಸುತ್ತಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Update: 2022-07-20 15:46 GMT

ಮೈಸೂರು,ಜು.20: ಜನರ ಭಾವನೆಗೆ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸುತ್ತಾರೆ. ಪ್ರಧಾನಿ ಮೋದಿ ತಾಯಿ ಹೃದಯದವರು. ಅವರು ದೇಶಕ್ಕೆ ನಿಜವಾದ ತಾಯಿ. ಅವರಿಗೆ ಜನರ ಭಾವನೆಗಳು ಅರ್ಥವಾಗುತ್ತದೆ ಎಂದು ಕೇಂದ್ರ ಕೃಷಿ ಖಾತೆ  ರಾಜ್ಯಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. 

ಶ್ರೀಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಹಿನ್ನಲೆಯಲ್ಲಿ ಬುಧವಾರ ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಜಿಎಸ್ ಟಿ ಸಂಬಂಧ ಸಭೆ ಇದೆ. ಜಿಎಸ್ ಟಿ ಕಡಿಮೆ ಮಾಡಬಹುದು. ಇದೆಲ್ಲಾ ಶಕ್ತಿ ಪ್ರಧಾನಮಂತ್ರಿಗಳ ಕೈಲಿದೆ. ಜನರ ಭಾವನೆಗೆ ಪ್ರಧಾನ ಮಂತ್ರಿ ಸ್ಪಂದಿಸುತ್ತಾರೆ ಎಂದರು.

ರಾಜ್ಯದಲ್ಲಿ ಮಳೆಯಿಂದಾದ ನೆರೆಪ್ರವಾಹ ವಿಚಾರಕ್ಕೆ ಪ್ರತಿಕ್ರಿಯಿಸಿ ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೂಡ ಕೇಂದ್ರದ ಕೈ ಸೇರಿಲ್ಲ. ನೆರೆ ಪ್ರವಾಹ ಸಂಪೂರ್ಣ ತಗ್ಗಿದ ಮೇಲೆ ನಷ್ಟ ಎಷ್ಟು ಎಂಬುದು ಗೊತ್ತಾಗಲಿದೆ. ಪ್ರವಾಹ ತಗ್ಗುವವರೆಗೆ ಬೆಳೆ ನಷ್ಟದ ಅಂದಾಜು ಕಷ್ಟ. ಈಗ ಕೇವಲ ರಸ್ತೆ, ಸೇತುವೆ ನಾಶವಾಗಿರುವ ಬಗ್ಗೆ ಮಾತ್ರ ವರದಿ ತಯಾರಾಗುತ್ತಿದೆ. ಪ್ರವಾಹದಲ್ಲಿ ಬಹಳ ಜಿಲ್ಲೆಗಳ ರೈತರ ಬೆಳೆ ಕೊಚ್ಚಿ ಹೋಗಿದೆ. ರಾಜ್ಯದಲ್ಲಿ ರಸಗೊಬ್ಬರ, ಬೀಜಗಳ ಕೊರತೆ ಇಲ್ಲ. ಅವರಿಗೆ ಮತ್ತೊಮ್ಮೆ ರಸಗೊಬ್ಬರ ಬೀಜ ವಿತರಿಸಲು ವ್ಯವಸ್ಥೆ ಮಾಡಲಾಗುವುದು. ಹಿಂದೆ ಕೊಟ್ಟ ರಸಗೊಬ್ಬರ ಬೀಜದಲ್ಲಿ ಅವರು ಬೆಳೆದ ಬೆಳೆ ನೀರು ಪಾಲಾಗಿದೆ. ಇದರ ಎಲ್ಲಾ ವರದಿಗಳನ್ನು ತರಿಸಿಕೊಳ್ಳುತ್ತಿದ್ದೇವೆ. ನನ್ನ ಜಿಲ್ಲೆಯಲ್ಲಿಯೂ ಸಾಕಷ್ಟು ಬೆಳೆ ಹಾನಿಯಾಗಿದೆ ಎಂದು ತಿಳಿಸಿದರು. ಎನ್ ಡಿಆರ್ ಎಫ್ , ಎಸ್ ಟಿಆರ್ ಎಫ್ ತಂಡ, ಅಲ್ಲಿನ ಅಧಿಕಾರಿಗಳು ಕೂಡ ಸರ್ವೆ ಮಾಡಿಕೊಡಬಹುದು ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News