ನನಗೂ ಸಿಎಂ ಆಗುವ ಆಸೆ ಇದೆ, ಆದರೆ...: ಶಾಸಕ ಝಮೀರ್ ಅಹ್ಮದ್

Update: 2022-07-21 08:41 GMT

ಬೆಂಗಳೂರು: 'ಎಲ್ಲರಿಗೂ ಮುಖ್ಯಮಂತ್ರಿಯಾಗಲು ಆಸೆ ಇರುತ್ತದೆ. ಆದರೆ ಒಂದು ಸಮಾಜದ ಬೆಂಬಲದಿಂದ ಯಾರೂ ಕೂಡ ಮುಖ್ಯಮಂತ್ರಿಯಾಗಲು ಸಾಧ್ಯ ಇಲ್ಲ' ಎಂದು ಚಾಮರಾಜಪೇಟೆ ಮತ ಕ್ಷೇತ್ರದ ಶಾಸಕ ಝಮೀರ್ ಅಹ್ಮದ್ ಹೇಳಿದ್ದಾರೆ. 

ಡಿ.ಕೆ ಶಿವಕುಮಾರ್ ಅವರ ಒಕ್ಕಲಿಗ ಸಮಾಜದ ಬೆಂಬಲದ ಕುರಿತ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಎಲ್ಲ ಸಮಾಜದವರ ಬೆಂಬಲಿಸಿದರೆ ಮಾತ್ರ  ಮುಖ್ಯಮಂತ್ರಿಯಾಗೋದಕ್ಕೆ ಸಾಧ್ಯ. ನನಗೂ ಸಿಎಂ ಆಗುವ ಆಸೆ ಇದೆ, ನನ್ನ ಸಮುದಾಯ ಕೂಡ ಒಕ್ಕಲಿಗ ಸಮಾಜಕ್ಕಿಂತ ಹೆಚ್ಚು ಪರ್ಸೆಂಟೇಜ್ ಮತಗಳನ್ನು ಹೊಂದಿದೆ. ಈ ಒಂದು ಸಮಾಜ ಮಾತ್ರ ನನಗೆ ವೋಟ್ ಕೊಟ್ಟರೆ ನಾನು ಮುಖ್ಯಮಂತ್ರಿಯಾಗೋದಕ್ಕೆ ಸಾಧ್ಯನಾ? ಎಂದು ಪ್ರಶ್ನಿಸಿದ್ದಾರೆ. 

'ಸಿದ್ದರಾಮಯ್ಯ ಅವರು ಯಾವತ್ತೂ ಹುಟ್ಟು ಹಬ್ಬ ಆಚರಣೆ ಮಾಡಿದವರಲ್ಲ. ಸಿದ್ದರಾಮಯ್ಯ ಉತ್ಸವ ಅವರು ಮಾಡ್ತಾ ಇಲ್ಲ, ಅವರ ಅಭಿಮಾನಿಗಳು ನಾವೆಲ್ಲ ಸೇರಿ ಮಾಡ್ತಾ ಇದ್ದೇವೆ. ಇದರಲ್ಲಿ ಸಿದ್ದರಾಮಯ್ಯ ಅವರ ಕೈವಾಡ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಇದನ್ನೂ ಓದಿ... ಒಕ್ಕಲಿಗರ ಬೆಂಬಲ ಕೇಳುವುದರಲ್ಲಿ ತಪ್ಪೇನಿದೆ?: ಡಿ.ಕೆ.ಶಿವಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News