ಝಮೀರ್ ಅಹ್ಮದ್ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ: ಡಿ.ಕೆ ಶಿವಕುಮಾರ್

Update: 2022-07-21 09:02 GMT

ಬೆಂಗಳೂರು:  ಒಂದು ಸಮಾಜದ ಬೆಂಬಲದಿಂದ ಯಾರೂ ಕೂಡ ಮುಖ್ಯಮಂತ್ರಿಯಾಗಲು ಸಾಧ್ಯ ಇಲ್ಲ ಎಂಬ  ಚಾಮರಾಜಪೇಟೆ ಶಾಸಕ ಝಮೀರ್ ಅಹ್ಮದ್ ಖಾನ್ ಅವರ ಹೇಳಿಕೆಗೆ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಫ್ರೀಡಂ ಪಾರ್ಕ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, 'ಝಮೀರ್ ಅವರಿಗೆಲ್ಲ ಉತ್ತರ ಕೊಡಲು ನಾನು ತಯಾರಿಲ್ಲ. ಇಂತಹ ನೂರು ಮಂದಿ ಹೇಗೆ ಏನು ಬೇಕಾದರೂ ಮಾತನಾಡಿದರೂ ಕಾಂಗ್ರೆಸ್ ನಿಭಾಯಿಸುತ್ತದೆ. ಕಾಂಗ್ರೆಸ್ ಪಾರ್ಟಿಯಲ್ಲಿ ಎಲ್ಲರೂ ಕಾಂಗ್ರೆಸ್ ಲೈನ್ ಗೆ ಹೋಗಬೇಕು. ಕಾಂಗ್ರೆಸ್ ಗೆ ಎಲ್ಲ ಸಮುದಾಯದ ಜನರ ಬಂಬಲ ಬೇಕು' ಎಂದು ಹೇಳಿದ್ದಾರೆ. 

'ಎಲ್ಲ ಸಮಾಜದವರ ಬೆಂಬಲಿಸಿದರೆ ಮಾತ್ರ  ಮುಖ್ಯಮಂತ್ರಿಯಾಗೋದಕ್ಕೆ ಸಾಧ್ಯ. ನನಗೂ ಸಿಎಂ ಆಗುವ ಆಸೆ ಇದೆ, ನನ್ನ ಸಮುದಾಯ ಕೂಡ ಒಕ್ಕಲಿಗ ಸಮಾಜಕ್ಕಿಂತ ಹೆಚ್ಚು ಪರ್ಸೆಂಟೇಜ್ ಮತಗಳನ್ನು ಹೊಂದಿದೆ. ಈ ಒಂದು ಸಮಾಜ ಮಾತ್ರ ನನಗೆ ವೋಟ್ ಕೊಟ್ಟರೆ ನಾನು ಮುಖ್ಯಮಂತ್ರಿಯಾಗೋದಕ್ಕೆ ಸಾಧ್ಯನಾ?' ಎಂದು ಝಮೀರ್ ಅಹ್ಮದ್ ಡಿ.ಕೆ ಶಿವಕುಮಾರ್ ಅವರ ಒಕ್ಕಲಿಗ ಸಮಾಜದ ಬೆಂಬಲದ ಕುರಿತ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದರು. 

ಇದನ್ನೂ ಓದಿ... ನನಗೂ ಸಿಎಂ ಆಗುವ ಆಸೆ ಇದೆ, ಆದರೆ...: ಶಾಸಕ ಝಮೀರ್ ಅಹ್ಮದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News