×
Ad

60 ವರ್ಷಕ್ಕೂ ಹೆಚ್ಚು ಕಾಲ ದೇಶವಾಳಲು ಅವಕಾಶ ನೀಡಿದ ಜನತೆಯ ಋಣ ಇವರಿಗಿಲ್ಲ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

Update: 2022-07-21 17:53 IST

ಬೆಂಗಳೂರು, ಜು. 21: ‘ಮೂರು-ನಾಲ್ಕು ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಅವರ ಋಣ ಸಂದಾಯ ಮಾಡಬೇಕಿದೆ! ನಕಲಿ ಗಾಂಧಿ ಕುಟುಂಬಕ್ಕಾಗಿ ಮಾಡಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ ರಮೇಶ್‍ಕುಮಾರ್ ಆಡಿದ ಮಾತುಗಳಿವು. 60 ವರ್ಷಕ್ಕೂ ಹೆಚ್ಚು ಕಾಲ ದೇಶವಾಳಲು ಅವಕಾಶ ನೀಡಿದ ಜನತೆಯ ಋಣ ಇವರಿಗಿಲ್ಲ, ಇಟಲಿಯಿಂದ ಬಂದವರಿಗೆ ಎಂತಹಾ ನಿಷ್ಠೆ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಋಣ ಸಂದಾಯ ಎಂದರೆ ಏನು? ಈ ದೇಶದ ಜನತೆಗೆ ನಕಲಿ ಗಾಂಧಿ ಕುಟುಂಬ ತಮ್ಮ ಮನೆಯಿಂದ ಏನನ್ನೂ ಕೊಟ್ಟಿಲ್ಲ. ಅವರಿಗೆ ಎಲ್ಲವೂ ಸಂದಾಯವಾದದ್ದು ಈ ದೇಶದಿಂದಲೇ, ಆದರೆ ಅಂತಿಮವಾಗಿ ನಕಲಿ ಗಾಂಧಿ ಕುಟುಂಬ ದೇಶಕ್ಕೆ ಮಾಡಿದ್ದು ಅನ್ಯಾಯ ಮಾತ್ರ' ಎಂದು ಟೀಕಿಸಿದೆ.

‘ಸಂವಿಧಾನದ ಬಗ್ಗೆ ಭಾರೀ ಜ್ಞಾನ ಹೊಂದಿರುವ ರಮೇಶ್‍ಕುಮಾರ್ ನಕಲಿ ಗಾಂಧಿ ಕುಟುಂಬವನ್ನು ಸಂವಿಧಾನಕ್ಕೆ ಅತೀತರನ್ನಾಗಿಸಲು ಯತ್ನಿಸುತ್ತಿದ್ದಾರೆ. ದೇಶದ ಆಸ್ತಿ ಕಬಳಿಸಿದ ವ್ಯಕ್ತಿಗಳನ್ನು ಭಾವನಾತ್ಮಕ ವಿಚಾರಗಳ ಮೂಲಕ ರಕ್ಷಿಸಲು ಹೊರಟಿದ್ದೇಕೆ? ನಿಮ್ಮ ಋಣ ಸಂದಾಯ ಮಾಡಿ. ಆದರೆ ಆ ಭಾರವನ್ನು ದೇಶದ ಮೇಲೆ ಹೊರಿಸಬೇಡಿ!' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News