×
Ad

'ಟ್ರಬಲ್ ಶೂಟರ್ ಬಿರುದಾಂಕಿತ ಡಿಕೆಶಿ ಈಗ ಟ್ರಬಲ್‌ಗೆ ಸಿಲುಕಿದ್ದಾರೆ': ಬಿಜೆಪಿ

Update: 2022-07-25 17:46 IST

ಬೆಂಗಳೂರು: 'ತಾನು ಕನಕಪುರದ ಬಂಡೆ, ಟ್ರಬಲ್ ಶೂಟರ್ ಇತ್ಯಾದಿ ಬಿರುದಾಂಕಿತರಾದ ಡಿ.ಕೆ ಶಿವಕುಮಾರ್ ಅವರೀಗ ಟ್ರಬಲ್‌ಗೆ ಸಿಲುಕಿದ್ದಾರೆ. ಜೆಡಿಎಸ್ ತ್ಯಜಿಸಿ ಓಡಿ ಬಂದ ಸಾಮಾನ್ಯ ಶಾಸಕನ ಬಾಯಿ ಮುಚ್ಚಿಸಲಾರದಷ್ಟು ಡಿಕೆಶಿ ಅಸಹಾಯಕರಾಗಿದ್ದೇಕೆ?' ಎಂದು ಬಿಜೆಪಿ ಪ್ರಶ್ನೆ ಮಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ,  'ಕೆಪಿಸಿಸಿ ಅಧ್ಯಕ್ಷ ಎಂದರೆ ಕಾಂಗ್ರೆಸ್ ಹೈಕಮಾಂಡಿನ ನೇರ ಪ್ರತಿನಿಧಿ ಎಂಬುದು ಕಾಂಗ್ರೆಸ್ ವ್ಯವಸ್ಥೆ. ಆದರೆ ಜಮೀರ್ ಅವರಂತ ಶಾಸಕರೇ ಕೆಪಿಸಿಸಿ ಅಧ್ಯಕ್ಷರನ್ನು ಕಾಡುವುದನ್ನು ನೋಡಿದರೆ ಸಿದ್ದರಾಮಯ್ಯ ‌ಬಣ ಮೇಲುಗೈ ಸಾಧಿಸುತ್ತಿರುವ ಲಕ್ಷಣ ಕಾಣುತ್ತಿದೆ. ಅಂದರೆ ಡಿಕೆಶಿ ಬೆವರಿನ ಶ್ರಮ ವ್ಯರ್ಥವೇ?' ಎಂದು ಬಿಜೆಪಿ ಕುಟುಕಿದೆ. 

'ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂದು ಡಿಕೆಶಿ ಎಚ್ಚರಿಕೆ ನೀಡಿದ ಬಳಿಕವೂ ಜಮೀರ್ ಅಹ್ಮದ್ ಖಾನ್ ಕಿಂಚಿತ್ ಹೆದರಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಶಿವಕುಮಾರ್ ಅವರ ಸ್ಟ್ರೈಕ್ ರೇಟ್ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂಬುದಕ್ಕೆ ಈ ವಿದ್ಯಮಾನವೇ ಸಾಕ್ಷಿ. ಕೆಪಿಸಿಸಿ ಅಧ್ಯಕ್ಷರ ಆಜ್ಞೆಗೆ ಕವಡೆ ಕಿಮ್ಮತ್ತಿಲ್ಲವೇ?' ಎಂದು ಕಾಂಗ್ರೆಸ್ ಟ್ವೀಟಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News