ರಾಜೀನಾಮೆ ಬದಲು ಬೀದಿಗಳಿದು ಹೋರಾಡಿ: ಬಿಜೆಪಿ ಕಾರ್ಯಕರ್ತರಿಗೆ ಸೊಗಡು ಶಿವಣ್ಣ ಕರೆ
ತುಮಕೂರು.ಜು.28: ಬಿಜೆಪಿ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ,ಪಕ್ಷದ ವಿವಿಧ ಹುದ್ದೆಗಳಿಗೆ ಕಾರ್ಯಕರ್ತರು ರಾಜೀನಾಮೆ ನೀಡುವ ಬದಲು ತುರ್ತು ಪರಿಸ್ಥಿತಿ ಸಂದರ್ಭದ ರೀತಿ, ಬೀದಿಗಿಳಿದು ಸರಕಾರದ ವಿರುದ್ದ ಹೋರಾಟ ನಡೆಸಬೇಕೆಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸೊಗಡು ಶಿವಣ್ಣ ಕರೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಹೋರಾಟವೆಂಬುದು ಬಿಜೆಪಿಗೆ ಹೊಸದಲ್ಲ. ಈ ಹಿಂದೆ ತುರ್ತ ಪರಿಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಮುದ್ವಾಳತ್ವದಲ್ಲಿ ಬೀದಿಗಿಳಿದು ಹೋರಾಟ ನಡೆಸಿ,ಜೈಲು ವಾಸ ಅನುಭವಿಸಿ,ದೇಶದ ಜನರಿಗೆ ವಾಕ್ ಸ್ವಾತಂತ್ರವನ್ನು ಉಳಿಸಿಕೊಟ್ಟಿದ್ದೇವೆ.ಅದೇ ರೀತಿ ಇಂದಿನ ಸಂದಭದಲ್ಲಿಯೂ ದೃತಿಗೇಡದೆ ಸರಕಾರದ ನಡವಳಿಕೆಗಳ ವಿರುದ್ದ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ ಎಂದರು.
1947ರಲ್ಲಿಯೇ ಧರ್ಮದ ಆಧಾರದಲ್ಲಿ ಪಾಕಿಸ್ಥಾನ, ಭಾರತ ಎಂದು ವಿಭಜನೆಯಾಗಿದ್ದರೂ, ಭಾರತದಲ್ಲಿರುವ ಮುಸ್ಲಿಂರು ಇಲ್ಲಿನ ಹಿಂದೂಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಆ ಸಮುದಾಯದ ಧಾರ್ಮಿಕ ಮುಖಂಡರು ಬೀಡುತ್ತಿಲ್ಲ. ಬದಲಿಗೆ ದ್ವೇಷ ಬಿತ್ತಿ ನಮ್ಮ ಹಿಂದು ಯುವಕರನ್ನು ಎಲ್ಲೆಂದರಲ್ಲಿ ಕೊಚ್ಚಿ ಹಾಕುವಂತೆ ಪ್ರಚೋದಿಸುತ್ತಿದ್ದಾರೆ.ಸರಕಾರ ಇದನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.ಅಲ್ಲದೆ ಅಧಿಕಾರಿಗಳು ಸ್ವತಂತ್ರರಾಗಿ ನಿರ್ಣಯ ತೆಗೆದುಕೊಳ್ಳಲು ರಾಜಕಾರಣಿಗಳು ಅವಕಾಶ ನೀಡುತ್ತಿಲ್ಲ ಎಂದು ಸೊಗಡು ಶಿವಣ್ಣ ಆರೋಪಿಸಿದರು.
ಇಂದು ಎಲ್ಲಾ ಜನಪ್ರತಿನಿಧಿಗಳು ಧರ್ಮವನ್ನು ಬಿಟ್ಟು,ಜಾತಿಯ ಆಧಾರದಲ್ಲಿ ಒಂದಾಗಲು ಹೊರಟಿದ್ದಾರೆ.ಇದರ ಪರಿಣಾಮ ಹಿಂದು ಸಮಾಜ ದುರ್ಬಲವಾಗುತ್ತಿದೆ.ಹಿಂದು,ಮುಸ್ಲಿಂ ನಡುವೆ ದಂಗೆಯಾಗುವ ಸಾಧ್ಯತೆಯೇ ಹೆಚ್ಚು. ಜಾತಿಯ ಹೆಸರಿನಲ್ಲಿ ದೇಶವನ್ನು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸಲಾಗುತ್ತಿದೆ.ಜಾತಿಯತೆ ನಿರ್ಮೂಲನೆ ಮಾಡದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ವೆಂದ ಅವರು,ಮುಸ್ಲಿಂರು ಹಿಂದುಗಳ ವಿರುದ್ದ ಆಘೋಚರ ಯುದ್ದ ಸಾರಿದ್ದಾರೆ.ಇದರ ಪರಿಣಾಮವಾಗಿ 2018 ರಿಂದ ಇಂದಿನ ವರೆಗೆ 35-40 ಜನ ಹಿಂದೂ ಯುವಕರು ಕರಾವಳಿ ಭಾಗದಲ್ಲಿ ಭರ್ಬರವಾಗಿ ಹತ್ಯೆಯಾಗಿದ್ದಾರೆ. ಇದರ ವಿರುದ್ದ ಗಾಂಧೀ ಮಾರ್ಗ ಇಲ್ಲವೇ, ನೇತಾಜಿ ಮಾರ್ಗ ಎರಡರೊಳಗೆ ಒಂದನ್ನು ಹಿಡಿದು ಹೋರಾಟ ಮಾಡದೇ ವಿಧಿಯಿಲ್ಲ ಎಂದರು.
ಕರಾವಳಿ ಭಾಗದಲ್ಲಿ ನಡೆದಿರುವ ಹತ್ಯೆಗಳ ಕುರಿತು ಸರಕಾರ ತನ್ನ ಗುಪ್ತಚರ ಇಲಾಖೆಯ ಮೂಲಕ ಕಂಡು ಹಿಡಿದು ಅವರನ್ನು ತಾಲಿಬಾನ್ ರೀತಿಯಲ್ಲಿ ಸಾರ್ವಜನಿಕವಾಗಿ ನೇಣು ಹಾಕಬೇಕು. ಮುಸ್ಲಿಮರಿಗೆ ಈ ದೇಶದಲ್ಲಿ ಯಾವುದೇ ಹಕ್ಕಿಲ್ಲ. 1947ರಲ್ಲಿಯೇ ಪೂರ್ವ ಪಾಕಿಸ್ಥಾನ ಮತ್ತು ಪಶ್ಚಿಮ ಪಾಕಿಸ್ಥಾನ ಸ್ಥಾಪನೆಯಾದಾಗಲೇ ಕಳೆದುಕೊಂಡಿದ್ದಾರೆ ಎಂದ ಅವರು, ಮುಖ್ಯಮಂತ್ರಿಗಳಾಗಲಿ,ಪಕ್ಷದ ರಾಜಾಧ್ಯಕ್ಷನಾಗಲಿ ಇಂತಹ ಘಟನೆಗಳ ಕುರಿತು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸೊಗಡು ಶಿವಣ್ಣ ತಿಳಿಸಿದರು.