×
Ad

ಚಿಕ್ಕಮಗಳೂರು: ಥಿಯೇಟರ್‌ನಲ್ಲಿ ವಿಕ್ರಾಂತ್ ರೋಣ ಸಿನೆಮಾ ವೀಕ್ಷಣೆ ವೇಳೆ ಎರಡು ಗುಂಪುಗಳ ಮಧ್ಯೆ ಮಾರಾಮಾರಿ

Update: 2022-07-28 19:40 IST

ಚಿಕ್ಕಮಗಳೂರು, ಜು.28: ನಗರದ ಮಿಲನ್ ಚಿತ್ರಮಂದಿರದಲ್ಲಿ ವಿಕ್ರಾಂತ್ ರೋಣ ಚಿತ್ರ ವೀಕ್ಷಣೆ ವೇಳೆ ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದು ಓರ್ವ ಯುವಕನಿಗೆ ಗಂಭೀರಗಾಯವಾಗಿದ್ದು, ಮತ್ತೋರ್ವ ಯುವಕನಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ.

ಚಿತ್ರಮಂದಿರದಲ್ಲಿ ಸಿನೆಮಾ ವೀಕ್ಷಣೆ ವೇಳೆ ಪದೇ ಪದೇ ಎದ್ದು ಹೋಗುವುದು, ಬರುವುದನ್ನು ಮಾಡುತ್ತಾ ಸಿನೆಮಾ ವೀಕ್ಷಣೆ ಮಾಡಲು ತೊಂದರೆ ಮಾಡುತ್ತಿದ್ದಾನೆ ಎಂಬ ಕ್ಷುಲ್ಲಕ ಕಾರಣಕ್ಕೆ ನಗರದ ಕೋಟೆ ನಿವಾಸಿ ಭರತ್ ಹಾಗೂ ಇಳೆಹೊಳೆ ಗಣೇಶ್ ಗುಂಪುಗಳ ಮಧ್ಯೆ ಗಲಾಟೆ ನಡೆದಿದ್ದು, ಚಿತ್ರಮಂದಿರದ ಆವರಣದಲ್ಲಿ ಹಾಡುಹಗಲೇ ಲಾಂಗು ಮುಚ್ಚುಗಳಿಂದ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಒಡೆದಾಟದಿಂದಾಗಿ ಭರತ್ ಎಂಬಾತನಿಗೆ ಇಳೆಹೊಳೆ ಗಣೇಶ್ ಕಡೆಯವರು ಚಾಕುವಿನಿಂದ ಇರಿದಿದ್ದು, ಗಂಭೀರ ಗಾಯಗೊಂಡ ಭರತ್‍ನನ್ನು ಹಾಸನದ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಪ್ರವೀಣ್ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News