ಜಿ.ಟಿ.ದೇವೇಗೌಡ ಜೆಡಿಎಸ್‍ನಲ್ಲೇ ಇದ್ದಾರೆ, ಮುಂದೆಯೂ ಇರುತ್ತಾರೆ: ಎಚ್.ಡಿ.ಕುಮಾರಸ್ವಾಮಿ
ಮೈಸೂರು,ಜು.28: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ನಲ್ಲೇ ಇದ್ದಾರೆ. ಮುಂದೆಯೂ ಅವರು ಜೆಡಿಎಸ್ ನಲ್ಲೇ ಇರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್ ನಲ್ಲೇ ಇದ್ದಾರೆ. ಇದನ್ನು ಹತ್ತು ಬಾರಿ ಅವರು ಹೇಳಿದ್ದಾರೆ. ಅವರು ಜೆಡಿಎಸ್ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಅವರೊಂದಿಗೆ ನಾಲ್ಕು ಬಾರಿ ನಾನು ಮಾತನಾಡಿದ್ದೇನೆ, ಸಮಯ ನೋಡಿಕೊಂಡು ನಮ್ಮೊಂದಿಗೆ ಸೇರಿಕೊಳ್ಳುತ್ತಾರೆ ಎಂದು ಹೇಳಿದರು.
ಚಾಮುಂಡೇಶ್ವರಿ ಕ್ಷೇತ್ರದ ಚಾಮುಂಡಿ ಬೆಟ್ಟದ ಶ್ರೀಚಾಮುಂಡೇಶ್ವರಿ ಸನ್ನಿಧಿಯಿಂದಲೇ ನಾನು ಪಂಚರತ್ನ ಯಾತ್ರೆ ಆರಂಭಿಸುತ್ತೇನೆ. ಅದರಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರೂ ಭಾಗವಹಿಸುತ್ತಾರೆ. ಪಂಚರತ್ನ ಯಾತ್ರೆ ನೂರು ದಿನ ನಡೆಯಲಿದ್ದು, ನೂರು ಗ್ರಾಮಗಳಲ್ಲಿ ವಾಸ್ತವ್ಯ ಹೂಡುತ್ತೆನೆ. ಜೊತೆ ನೂರು ವಿಧಾನಸಭಾ ಕ್ಷೇತ್ರಗಳಲ್ಲು ಯಾತ್ರೆ ನಡೆಯಲಿದೆ ಎಂದು ಹೇಳಿದರು.