×
Ad

ಪಕ್ಷದ ಹೆಸರಿನಲ್ಲಿ ಮೃತ ಪ್ರವೀಣ್‌ ಕುಟುಂಬಕ್ಕೆ ಸಹಾಯ ಮಾಡುತ್ತೇವೆನ್ನುವವರಿಗೆ ಆಸ್ಪದ ನೀಡದಿರಿ: ಬಿಜೆಪಿ

Update: 2022-07-29 23:32 IST

ಮಂಗಳೂರು: ಮೊನ್ನೆ ತಾನೇ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಬಿಜೆಪಿ ಯುವಮೋರ್ಚಾ ನಾಯಕ ಪ್ರವೀಣ್‌ ನೆಟ್ಟಾರುರವರ ಕುಟುಂಬಕ್ಕೆ ಸಹಾಯ ಮಾಡುತ್ತೇವೆಂದು ಕೆಲವರು ವೈಯಕ್ತಿಕವಾಗಿ ತಮ್ಮದೇ ಖಾತೆಯನ್ನು ಬಳಸಿ ಬಿಜೆಪಿ ಹೆಸರಿನಲ್ಲಿ ಹಣ ಸಂಘ್ರಹ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕುರಿತು ಇಂತಹಾ ವ್ಯಕ್ತಿಗಳಿಗೆ ಯಾರೂ ಆಸ್ಪದ ನೀಡಬೇಡಿ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟನೆ ನೀಡಿದೆ. 

ಟ್ವೀಟ್‌ ನಲ್ಲಿ "ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ಪಕ್ಷದ ಹೆಸರು ಬಳಸಿಕೊಂಡು ಹಣ ಸಂಗ್ರಹ ಮಾಡುತ್ತಿರುವ ವಿಚಾರ ಪಕ್ಷದ ಗಮನಕ್ಕೆ ಬಂದಿದ್ದು, ಯಾರೂ ಕೂಡಾ ಇದಕ್ಕೆ ಆಸ್ಪದ ನೀಡಬೇಡಿ. ಬಿಜೆಪಿ ಪಕ್ಷ ಈಗಾಗಲೇ ಪ್ರವೀಣ್‌ ಅವರ ಕುಟುಂಬಕ್ಕೆ ಪ್ರಾಥಮಿಕ ಹಂತದ ಸಹಾಯ ಮಾಡಿದ್ದು ಮುಂದೆಯೂ ಕುಟುಂಬದ ಜೊತೆ ನಿಲ್ಲಲಿದೆ" ಎಂದು ಬಿಜೆಪಿ ಕರ್ನಾಟಕ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News