×
Ad

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಭೇಟಿಯಾದ ಸಿದ್ದರಾಮಯ್ಯ

Update: 2022-07-30 14:02 IST

ಚನ್ನೈ, ಜು.30: ತಮಿಳುನಾಡು ಪ್ರವಾಸದಲ್ಲಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು  ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

ತಮಿಳುನಾಡಿನ ವಿಡುದಲೈ ಚಿರುದೈಗಳ್ (ವಿಸಿಕೆ) ಪಕ್ಷ ಕೊಡುವ  'ಅಂಬೇಡ್ಕರ್ ಸುಡರ್' ಪ್ರಶಸ್ತಿ ಸ್ವೀಕರಿಸಲು ತಮ್ಮ ಆಪ್ತರೊಂದಿಗೆ ಚೆನ್ನೈಗೆ ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಯಾಣ ಬೆಳೆಸಿದ್ದಾರೆ. 

ಸಚಿವರಾದ ದೊರೈ ಮುರುಗನ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಳಗಿರಿ, ಸಂಸದರಾದ ತೋಲ್ ತಿರುಮಾವಲವನ್ ಮತ್ತಿತರ ನಾಯಕರು ಈ ವೇಳೆ ಹಾಜರಿದ್ದರು.

ಇದನ್ನೂ ಓದಿ: ಕೋಮು ದ್ವೇಷವನ್ನು ದೂರ ಮಾಡಿ, 30 ವರ್ಷಗಳ ಹಿಂದಿದ್ದ ಕರಾವಳಿಯನ್ನು ಮತ್ತೆ ನಿರ್ಮಾಣ ಮಾಡಿ'' ಯುವಕರಿಗೆ ಸಿದ್ದರಾಮಯ್ಯರಿಂದ ಬಹಿರಂಗ ಪತ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News