ಎನ್‌ಕೌಂಟರ್‌ಗಳು, ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-07-30 10:38 GMT

ಶಿವಮೊಗ್ಗ : ಎನ್‌ಕೌಂಟರ್‌ಗಳು ಹಾಗೂ ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ ಎಂದು ಗೃಹ ಸಚಿವ ಆರಗ  ಜ್ಞಾನೇಂದ್ರ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ. ಮಂಗಳೂರು ಇದೀಗ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಎನ್‌ಕೌಂಟರ್‌ಗಳು ಹಾಗೂ ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ. ಘಟನೆ ನಡೆದಾಗ ಹೀಗೆನ್ನಿಸುವುದು ಸಹಜ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ. ಇವೆಲ್ಲವೂ ನಿಲ್ಲಬೇಕು. ಫಾಸ್ಟ್ ಟ್ರಾಕ್ ಕೋರ್ಟ್ ಗೆ ಮನವಿ ಮಾಡುತ್ತಿದ್ದೇವೆ. ಬಿಸಿ ಇದ್ದಾಗಲೇ ತಟ್ಟಿದರೆ ಮುಂದೆ ಈ ಕೃತ್ಯ ನಡೆಸುವವರಿಗೆ ಎಚ್ಚರಿಕೆ ಗಂಟೆಯಾದಂತಾಗುತ್ತದೆ ಎಂದರು.

ನಮ್ಮ ಮನೆ ಎದುರು ಪ್ರತಿಭಟನೆ ನಡೆಸಿದರು ಎಂದಾಕ್ಷಾಣ ಅವರು ಕಾಂಗ್ರೆಸ್ ಜೊತೆಗೆ ಹೋಗುತ್ತಾರೆ ಎಂದಲ್ಲ. ಕಾರ್ಯಕರ್ತನನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ಹಾಗೇ ಆಕ್ರೋಶ ಎಂದು ಹೇಳಿದರು.

ಸೈದ್ಧಾಂತಿಕವಾಗಿ ನಾವೆಲ್ಲ ಒಂದಾಗಿಯೇ ಇದ್ದೇವೆ. ಇಂದು ನಮ್ಮ ಮನೆ ಬಳಿ ಬಂದು ಎಬಿವಿಪಿಯವರು ಪ್ರತಿಭಟನೆ ನಡೆಸಿದ್ದಾರೆ. ಪಿಎಫ್‌ಐ, ಎಸ್‌ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ನಮ್ಮಲ್ಲಿ ಬಾಡಿಗೆ ಹಣಕ್ಕೆ ಇರುವಂತಹ ಕಾರ್ಯಕರ್ತರಿಲ್ಲ. ಒಬ್ಬ ಕಾರ್ಯಕರ್ತರಾಗಿ ಬೆಳೆಯಲು ಸಾಕಷ್ಟು ವರ್ಷ ಬೇಕು. ಬಡವನಾದರೂ ಆತನ ಪಕ್ಷಕ್ಕೆ ಹಾಗೂ ಸಂಘಟನೆಗೆ ಒತ್ತು ನೀಡುತ್ತಾನೆ. ಇಂತಹ ಕಾರ್ಯಕರ್ತನನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ಹಾಗೇ ಆಕ್ರೋಶ ಎಂದರು.

ಸಿದ್ದರಾಮಯ್ಯ ಸಿಎಂ ಆದಾಕ್ಷಣ ಮತಾಂಧ ಶಕ್ತಿಗಳ ಮೇಲಿದ್ದ 2000 ಕೇಸ್ ಹಿಂಪಡೆದರು. ಟಿಪ್ಪು ಜಯಂತಿ ಆರಂಭಿಸುವ ಮೂಲಕ ರಕ್ತಪಾತ ಮಾಡಿಸಿದರು. ಇವರ ವೋಟ್ ಬ್ಯಾಂಕ್‌ಗಾಗಿ ಯಾರ್ಯಾರನ್ನೋ ಬೆಳೆಸಿದ್ದಾರೆ. ನಮ್ಮ ಮನೆ ಎದುರು ಪ್ರತಿಭಟನೆ ನಡೆಸಿದರು ಎಂದಾಕ್ಷಾಣ ಅವರು ಕಾಂಗ್ರೆಸ್ ಜೊತೆಗೆ ಹೋಗುತ್ತಾರೆ ಎಂದಲ್ಲ. ಸಿದ್ದರಾಮಯ್ಯ ಸರ್ಕಾರವಿದ್ದಾಗ ದುಷ್ಕೃತ್ಯ ನಡೆದರೆ ಕೇಸನ್ನೇ ದಾಖಲಿಸುತ್ತಿರಲಿಲ್ಲ. ಹರ್ಷ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಆರಾಮಾಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಜೈಲಿನ ಮೇಲೆ ದಾಳಿ ನಡೆಸಿ, 15 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News