ಮೈಸೂರಿನಲ್ಲಿ ರೈತರಿಂದ 'ದ್ರೋಹ ದಿವಸ್' ಪ್ರತಿಭಟನಾ ಧರಣಿ

Update: 2022-07-31 14:17 GMT

ಮೈಸೂರು: ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದ್ದ ದ್ರೋಹ ದಿವಸ್ ಪ್ರತಿಭಟನಾ ಧರಣಿಗೆ ಮೈಸೂರಿನಲ್ಲಿ ಬೆಂಬಲ ಸೂಚಿಸಿ ರೈತರು ಪ್ರತಿಭಟನೆ ನಡೆಸಿದರು.

ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಬಳಿ ರವಿವಾರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಫಣೆ ಕೂಗಿದರು.

ಇದೇ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿದ್ದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಹೋರಾಟ ದೆಹಲಿಯಲ್ಲಿ ಒಂದು ವರ್ಷ ನಡೆದ ಪರಿಣಾಮ ಮಧ್ಯಪ್ರವೇಶಿಸಿ ರೈತರ ಹೋರಾಟಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿ ಅವರು ಎಂ.ಎಸ್.ಪಿ.ಗೆ ಖಾತ್ರಿ, ರೈತರ ಮೇಲಿನ ಸುಳ್ಳು ಕೇಸ್ ಹಿಂಪಡೆಯುವುದು, ವಿದ್ಯುತ್‍ಚ್ಛಕ್ತಿ ಮಸೂದೆ ಮಂಡಿಸುವುದಿಲ್ಲ ಎಂಬ ಲಿಖಿತ ಭರವಸೆ ಕೊಟ್ಟಿದ್ದರು. ಆದರೆ ಇದೂವರೆಗೂ ಅವುಗಳನ್ನು ಜಾರಿಗೊಳಿಸದೆ ರೈತರಿಗೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂ.ಎಸ್.ಪಿ. ಖಾತ್ರಿಗೆ ಸಮಿತಿಯನ್ನು ರಚನೆ ಮಾಡಿದ್ದಾದರೂ ಅದರಲ್ಲಿ ಯಾರೂ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕೃಷಿ ಮಸೂದೆ ಕಾಯ್ದೆಯನ್ನು ಒಪ್ಪಿಕೊಂಡಿದ್ದರೋ ಅವರನ್ನು ಸಮಿತಿಗೆ ನೇಮಿಸಿಕೊಂಡಿದ್ದಾರೆ. ಇನ್ನೂ ಮೂವರು ಸಂಯುಕ್ತ ಕಿಸಾನ್ ಮೋರ್ಚಾದವರನು ನೇಮಕಮಾಡಿದ್ದಾರೆ. ಇದರ ಅರ್ಥ ಅವರು ಜಾರಿ ಗೊಳಿಸಿದ್ದ ಕೃಷಿ ಮಸೂದೆ ಪರ ಹೆಚ್ಚು ಬೆಂಬಲ ಪಡೆಯುವ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ಆಗಸ್ಟ್ 9ಕ್ಕೆ ಕ್ವಿಟ್ ಇಂಡಿಯಾ ಮೂವೆಮೆಂಟ್ ಜೈ ಜವಾನ್ ಜೈ ಕಿಸಾನ್ ಹೋರಾಟ ಪ್ರಾರಂಭವಾಗಿದ್ದು, ರೈತರು ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊಸಕೋಟೆ ಬಸವರಾಜು. ಪ್ರಸನ್ನ ಎನ್ ಗೌಡ. ಹಾಗೂ ಸಿಪಿಎಂ ಜಗದೀಶ್ ಸೂರ್ಯ. ಅನಿಲ್ ಕುಮಾರ್. ಪಿ.ಮರಂಕಯ್ಯ. ಆನಂದೂರು ಪ್ರಭಾಕರ. ಶಿರಮಳ್ಳಿ ಸಿದ್ದಪ್ಪ. ಹೆಜ್ಜಿಗೆ ಪ್ರಕಾಶ್. ಮಂಡಕಳ್ಳಿ ಮಹೇಶ್. ಬಸಪ್ಪ ನಾಯಕ ಬಸವರಾಜು ಹಲವಾರು ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News