ಚಿಕ್ಕಬಳ್ಳಾಪುರ | ಬೈಕಿನಲ್ಲಿ ಬಂದು ಹಲವರಿಗೆ ಚಾಕುವಿನಿಂದ ಚುಚ್ಚಿದ ಅಪರಿಚಿತ
Update: 2022-08-01 09:59 IST
ಚಿಕ್ಕಬಳ್ಳಾಪುರ, ಆ.1: ಅಪರಿಚಿತ ವ್ಯಕ್ತಿಯೊಬ್ಬ 15ಕ್ಕೂ ಅಧಿಕ ಮಂದಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ 10 ಗಂಟೆ ಸುಮಾರಿಗೆ ನಗರದಲ್ಲಿ ನಡೆದಿದೆ.
ಹೆಲ್ಮೆಟ್ ಧರಿಸಿ ಒಂದು ಕೈಯಲ್ಲಿ ಚಾಕು ಹಿಡಿದುಕೊಂಡು ವೇಗವಾಗಿ ಬೈಕ್ ಚಲಾಯಿಸಿಕೊಂಡಿ ಬಂದ ಅಪರಿಚಿತ ನಗರಸಭೆ, ಕಾರ್ಖಾನೆ ಪೇಟೆ, ಬಿಬಿ ರಸ್ತೆ, ಅಂಬಿಕಾ ಮೆಡಿಕಲ್ಸ್ ಮತ್ತಿತರ ಪ್ರದೇಶಗಳಲ್ಲಿ ನಿಂತಿದ್ದ ಹಲವರಿಗೆ ಇರಿದು ಪರಾರಿ ಆಗಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಪೊಲೀಸರು ಅಪರಿಚಿತ ದುಷ್ಕರ್ಮಿಗಾಗಿ ಹುಡುಕಾಟ ನಡೆಸಿದ್ದಾರೆ.
ಆರೋಪಿಯು ಮಾದಕ ದ್ರವ್ಯ ಸೇವಿಸಿದ್ದ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.