×
Ad

ಪಾವಗಡ: ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Update: 2022-08-01 19:29 IST

ಪಾವಗಡ: ತಾಲೂಕಿನ ನಾಗಲಮಡಿಕೆ ಕೆಜಿಬಿವಿ ಬ್ಯಾಂಕಿನಲ್ಲಿ ಐದು ಲಕ್ಷ ಸಾಲ. ಕೈ  ಸಾಲ ಹತ್ತು ಲಕ್ಷ.ಓಟು 15 ಲಕ್ಷ ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ಮೃತ ರೈತನನ್ನು ತಾಲೂಕಿನ ನಾಗಲಮಡಿಕೆ ಹೋಬಳಿಯ ಶ್ರೀರಂಗಪುರ ತಾಂಡದ ವಾಸಿ ರಾಮನಾಯ್ಕ್( 55 ವರ್ಷ) ಎಂದು ಗುರುತಿಸಲಾಗಿದೆ.  

ಕಳೆವು ದಿನಗಳ ಹಿಂದೆ ಸಕ್ಕರೆ ಕಾಯಿಲೆ ನರಳುತ್ತಿದ್ದು,  ಒಂದು ಕಾಲು ಕಳೆದುಕೊಂಡಿದ್ದರು. ಅದರಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮನೆಯಲ್ಲಿಯೇ ರವಿವಾರ ಮಧ್ಯಾಹ್ನ 1ಗಂಟೆ  ಮನೆಯಲ್ಲಿಯೇ  ಸುಮಾರಿಗೆ ಬೆಳೆಗೆ ಸಿಂಪಡಿಸುವ  ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News