×
Ad

'ಸಂಘಪರಿವಾರಿ' ಎಂದು ಗುರುತಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒದ್ದಾಟ: ಕಾಂಗ್ರೆಸ್

Update: 2022-08-01 20:12 IST

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳಿಗೆ ಸಂಬಂಧಿಸಿ ಮುಖ್ಯಮಂತ್ರಿಗಳನ್ನು  ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್,  'ಸಂಘಪರಿವಾರಿ' ಎಂದು ಗುರುತಿಸಿಕೊಳ್ಳಲು ಸಿಎಂ ಬೊಮ್ಮಾಯಿ ಒದ್ದಾಡುತ್ತಿದ್ದಾರೆ ಎಂದು ಹೇಳಿದೆ. 

ಈ ಕುರಿತು ಟ್ವೀಟ್ ಮಾಡಿರುವ  ಕಾಂಗ್ರೆಸ್, '' 10 ದಿನಗಳಲ್ಲಿ ಕರಾವಳಿಯಲ್ಲಿ 3 ಹತ್ಯೆಯಾಗಿವೆ. ಯಾವೊಂದು ಹತ್ಯೆಯ ಹಿಂದಿನ ಉದ್ದೇಶ ಇದುವರೆಗೂ ತನಿಖೆಯಿಂದ ತಿಳಿದುಬಂದಿಲ್ಲ. ಆದರೆ ಮುಖ್ಯಮಂತ್ರಿಗಳು ಪಕ್ಷಪಾತ ತೋರುವ ಮೂಲಕ ರಾಜ್ಯಕ್ಕೆ ಸಂದೇಶ ಕೊಡಲು ಹೊರಟಿದ್ದಾರೆ? ಸಂಘವನ್ನು ಓಲೈಸಲು ರಾಜಧರ್ಮ ಕೈಬಿಡುವುದಕ್ಕಿಂತ ರಾಜೀನಾಮೆ ನೀಡುವುದೇ ಲೇಸು '' ಎಂದು ಕಿಡಿಗಾರಿದೆ. 

''ಜನತಾ ಪರಿವಾರದಿಂದ ಬಿಜೆಪಿಗೆ ವಲಸೆ ಬಂದಿರುವ ಸಿಎಂ ಬೊಮ್ಮಾಯಿ ಅವರು 'ಸಂಘಪರಿವಾರಿ' ಎಂದು ಗುರುತಿಸಿಕೊಳ್ಳಲು ಸಾಕಷ್ಟು ಒದ್ದಾಡುತ್ತಿದ್ದಾರೆ. ಅಸ್ತಿತ್ವ & ಹುದ್ದೆ ಉಳಿಸಿಕೊಳ್ಳಲು ಅವರಿಗೆ ಅದು ಅನಿವಾರ್ಯ! ಅವರ ಸಂಘದ ಓಲೈಕೆ ಪ್ರಯತ್ನ ಹಾಗೂ ಕೋಮುಕ್ರಿಮಿಗಳಿಗೆ ಬೆಂಬಲಿಸಿದ್ದೇ ಇಂದು ರಾಜ್ಯದ ರಕ್ತಸಿಕ್ತ ಸ್ಥಿತಿಗೆ ಕಾರಣ'' ಎಂದು ಆಕ್ರೋಶ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News