''ಸಚಿವರಾಗಿ ಪ್ರಮಾಣ ಮಾಡಿದ್ದು ಸಂವಿಧಾನದ ಮೇಲೆ ಹೊರತು, ಮನುಸ್ಮೃತಿಯ ಮೇಲಲ್ಲ''

Update: 2022-08-01 15:03 GMT

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ವಿಚಾರಕ್ಕೆ ಸಂಬಂಧಿಸಿ ಇಂಧನ ಸಚಿವ ಸುನೀಲ್ ಕುಮಾರ್ ಅವರು ನೀಡಿದ್ದ ಹೇಳಿಕೆಗೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

'ಹಿಂದುತ್ವವನ್ನೇ ಆಧಾರವಾಗಿಟ್ಟುಕೊಂಡು ಅಧಿಕಾರ ನಡೆಸುತ್ತಿದ್ದೇವೆ' ಎಂಬ ಸಚಿವರ ಹೇಳಿಕೆಗೆ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ. 

''ಸುನಿಲ್ ಕುಮಾರ್ ಅವರೇ,  ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ಮಾಡಿದ್ದು ಸಂವಿಧಾನದ ಮೇಲೆ ಹೊರತು,ಮನುಸ್ಮೃತಿಯ ಮೇಲಲ್ಲ. ಭಾರತದ ಸಂವಿಧಾನದ ಪೀಠಿಕೆಯು "ನಮ್ಮ ದೇಶವು ಜಾತ್ಯತೀತ ರಾಷ್ಟ್ರ" ಎಂದು ಪ್ರತಿಪಾದಿಸಿದೆ. ಸಚಿವರು ರಾಜೀನಾಮೆ ನೀಡಿ ಹಿಂದೂ ರಾಷ್ಟ್ರಕ್ಕಾಗಿ ಹೋರಾಟ ಮಾಡುವುದಾದರೆ ನಾವು ಸಂವಿಧಾನದ ಆಧಾರದಲ್ಲಿ ಅವರನ್ನು ಎದುರಿಸಲು ಸಿದ್ಧ'' ಎಂದು ಬಿ.ಕೆ ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.

'ಸರಕಾರ ಬೇಕೋ ಹಿಂದುತ್ವ ಬೇಕೋ ಕೇಳಿದಾಗ ನಾವು ಸರಕಾರವನ್ನು ಬದಿಗಿಟ್ಟು ಹಿಂದುತ್ವವನ್ನು ಆಯ್ಕೆ ಮಾಡುತ್ತೇವೆ. ನಾವು ಇವತ್ತು ಹಿಂದುತ್ವವನ್ನೇ ಆಧಾರವಾಗಿ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದೇವೆ' ಎಂದು ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದರು. 

ಇದನ್ನೂ ಓದಿ: ಹಿಂದುತ್ವವನ್ನೇ ಆಧಾರವಾಗಿಟ್ಟುಕೊಂಡು ಅಧಿಕಾರ ನಡೆಸುತ್ತಿದ್ದೇವೆ: ಸಚಿವ ಸುನೀಲ್ ಕುಮಾರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News