×
Ad

ಬಿಜೆಪಿಗೆ ಬೇಕಿರುವುದು ಕಾರ್ಯಕರ್ತರಲ್ಲ, ಕಾರ್ಯಕರ್ತರ ಶವ ಮಾತ್ರ: ಕಾಂಗ್ರೆಸ್

Update: 2022-08-02 10:29 IST

ಬೆಂಗಳೂರು, ಆ.2: ಬಿಜೆಪಿಗೆ ಬೇಕಿರುವುದು ತನ್ನ ಪಕ್ಷದ ಕಾರ್ಯಕರ್ತರ ಶವ ಮಾತ್ರ ಎಂದು ಕಾಂಗ್ರೆಸ್ ಆರೋಪಿಸಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಲವು ಬಿಜೆಪಿಯ ಯುವ ಕಾರ್ಯಕರ್ತರು ರಾಜೀನಾಮೆ ನೀಡಿರುವ ಬಗ್ಗೆ ಸಂಸದ ಜಿಎಂ ಸಿದ್ದೇಶ್ವರ್‌ ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ. 

''ಈಶ್ವರಪ್ಪನವರ ನಂತರ ಸಂಸದ ಜಿಎಂ ಸಿದ್ದೇಶ್‌ರ ಸರದಿ. ತಮ್ಮದೇ ಕಾರ್ಯಕರ್ತರನ್ನು ಅವಮಾನಿಸುವ ಏಕೈಕ ಪಕ್ಷ 
! ರಾಜೀನಾಮೆ ಕೊಟ್ಟರೆ ಕೊಡಲಿ ಎನ್ನುವ ಬಿಜೆಪಿಯ ಅಸಲಿ ಧೋರಣೆ ಕಾರ್ಯಕರ್ತರು 'ಸತ್ತರೆ ಸಾಯಲಿ' ಎನ್ನುವುದು. ಬಿಜೆಪಿಗೆ ಬೇಕಿರುವುದು ಕಾರ್ಯಕರ್ತರಲ್ಲ, ಕಾರ್ಯಕರ್ತರ ಶವ ಮಾತ್ರ'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

'ಯುವ ಮೋರ್ಚಾ ಕಾರ್ಯಕರ್ತರ ರಾಜೀನಾಮೆಯಿಂದ ಪಕ್ಷವೇನೂ ಮುಳುಗಿ ಹೋಗುವುದಿಲ್ಲ’ ಎಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿಕೆ ನೀಡಿದ್ದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News