×
Ad

'ತಮ್ಮದೇ ಸರ್ಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿಯ ಬಾಡಿಗೆ ಭಾಷಣಕೋರ': ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ಟೀಕೆ

Update: 2022-08-02 14:57 IST

ಬೆಂಗಳೂರು: ''ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಸಂಭವಿಸಿದಂತೆಯೇ ಸರಿ  ಇಂತಹ ಅದ್ಬುತ ಸಂಭವಿಸಲು ಸರ್ಕಾರದ ವೈಫಲ್ಯಗಳು ಮಾತ್ರ ಕಾರಣವೇ, #BJPvsBJP ಜಟಾಪಟಿಯ ಮುಂದುವರಿದ ಭಾಗವೇ? ಅಥವಾ ವಲಸಿಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧದ ಅಸಹನೆಯೇ?'' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮುಖಂಡನ ಹತ್ಯೆ ಪ್ರಕರಣವನ್ನು ವಿರೋಧಿಸಿ ಚಕ್ರವರ್ತಿ ಸೂಲಿಬೆಲೆ ಸರಣಿ ಟ್ವೀಟ್ ಗಳನ್ನು ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರನ್ನು  ಟೀಕಿಸುತ್ತಿದ್ದು,  ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿಗಿಳಿದಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್,   ಬಿಜೆಪಿಯ ಬಾಡಿಗೆ ಬಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಎಂದು ಹೇಳಿದೆ. 

''ಕಡತಗಳಿಗೆ ಸಹಿ ಹಾಕಲು ಪುರಸೊತ್ತಿಲ್ಲದ ಸಿಎಂಗೆ ಸಿನೆಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಎಂದಿದ್ದಾನೆ ಬಿಜೆಪಿಯ ಬಾಡಿಗೆ ಬಾಷಣಕೋರ!
ಬೊಮ್ಮಾಯಿ ಅವರೇ, ತಮ್ಮ ನಿಷ್ಕ್ರೀಯತೆಯ ಬಗ್ಗೆ ನಿಮ್ಮವರಿಂದಲೇ ಟೀಕೆಗಳು ಬಂದಿದ್ದರೂ ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡದಿರುವುದೇಕೆ? ತಪ್ಪಿತಸ್ಥನ ಭಾವನೆಯೋ? ಅವರ ವಿರುದ್ಧ ಮಾತಾಡಲು ಭಯವೋ?''
ಎಂದು ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News