ಬೇಲೂರು; ದಲಿತರ ಸ್ಮಶಾನ ಭೂಮಿ ಕಬಳಿಸಲು ಹುನ್ನಾರ ಆರೋಪ: ಗ್ರಾಮಸ್ಥರಿಂದ ಪ್ರತಿಭಟನೆ

Update: 2022-08-02 15:14 GMT
(ಸ್ಮಶಾನ ಭೂಮಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರು )

ಬೇಲೂರು: ಆ, 2: ಭೂ ಮಾಲಕರೊಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಕಳೆದ 80 ವರ್ಷಗಳಿಂದ ದಲಿತರು ಶವ ಸಂಸ್ಕಾರ ಮಾಡುತ್ತಿರುವ ಸ್ಮಶಾನ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಸ್ಮಶಾನ ಭೂಮಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ತಾಲೂಕಿನ ಅರೇಹಳ್ಳಿ ಹೋಬಳಿ ಮಲಸಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸನ ಗುಡ್ಡ ಗ್ರಾಮಸ್ಥರು,  ಕಳೆದ 80 ವರ್ಷಗಳಿಂದ ಸರ್ಕಾರಿ ಭೂಮಿಯಾದ ಸರ್ವೆ ನಂಬರ್ 138 ರಲ್ಲಿ ಮೂರು ಎಕರೆ ಭೂಮಿಯನ್ನು ಸ್ಮಶಾನ (ಶವಸಂಸ್ಕಾರ) ಮಾಡಲು ಬಳಕೆ ಮಾಡಲಾಗುತ್ತಿದೆ ಇತ್ತೀಚೆಗೆ ಮಲಸಾವರ ಗ್ರಾಮದ ಗುರುಬಸಪ್ಪ ಹಾಗೂ ನಿತಿನ್ ಎಂಬ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡಿ ತಂತಿ ಬೆಲಿ ನಿರ್ಮಿಸಿ ಭೂಮಿಯನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಗ್ರಾಮಸ್ಥರಾದ  ಮಾಜಿ ಗ್ರಾಮ ಪಂಚಾಯತ್ ಸದಸ್ಯ ರಾಜು ಹಾಗೂ ಪ್ರೇಮ ಗ್ರಾಮದಲ್ಲಿ  ನೂರು ಕುಟುಂಬ ಗಳಿಗೂ ಹೆಚ್ಚು ಮನೆಗಳಿವೆ 350 ರಿಂದ 400  ಜನ ವಾಸ ಮಾಡುತ್ತಿದ್ದೇವೆ ದಿನ ಕಳೆದಂತೆ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸ್ಮಶಾನ ಭೂಮಿಯನ್ನು ಅಧಿಕೃತವಾಗಿ ಮಂಜೂರು ಮಾಡಿಕೊಡುವಂತೆ ಕಳೆದ ಮೂರು ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ನಾಡಕಛೇರಿ ಉಪ ತಹಸೀಲ್ದಾರ್ ರವರಿಗೂ ಗ್ರಾಮಸ್ಥರು ಮನವಿ ಕೊಟ್ಟರು ಇಲ್ಲಿವರೆಗೂ ಯಾವುದೇ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಕೂಡಲೇ ತಹಶೀಲ್ದಾರ್ ರವರು ಸ್ಥಳಕ್ಕೆ ಭೇಟಿ ನೀಡಿ  ಸ್ಮಶಾನ ಭೂಮಿಗೆ ನ್ಯಾಯ ದೊರಕಿಸಿ ಕೊಡಬೇಕು ಇಲ್ಲವಾದರೆ ತಾಲೂಕು ಕಛೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. 

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶೇಖರ್ ಚಂದ್ರಯ್ಯ  ಭದ್ರೇಶ್ ಕಲಾವತಿ  ಇಂದ್ರಮ್ಮ ಧರ್ಮೇಶ್  ಪುಟ್ಟಸ್ವಾಮಿ ನಿಖಿತ್ ಕುಮಾರ್  ಹರೀಶ್ ಇತರರು ಹಾಜರಿದ್ದರು.

ಮಲೆನಾಡು ಭಾಗದ ಹಳ್ಳಿಗಳಲ್ಲಿ ಇತ್ತೀಚೆಗೆ ಭೂ ಮಾಫಿಯಾ ಬಾರಿ ಸದ್ದು ಮಾಡುತ್ತಿದೆ ನಕಲಿ ದಾಖಲೆಯನ್ನು ಸೃಷ್ಟಿ ಮಾಡಿ ಭೂಕಬಳಿಕೆ ಮಾಡುವವರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗಿದೆ  ಸ್ಮಶಾನ ಭೂಮಿಯನ್ನು ಕಬಳಿಸಲು ಹೊರಟಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ  ಕೈಗೊಳ್ಳಬೇಕು ಗ್ರಾಮದಲ್ಲಿನ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು 3 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಿಕೊಡಬೇಕು ಇಲ್ಲದಿದ್ದರೆ ಹೋರಾಟ ರೂಪಿಸಲಾಗುವುದು

 ದಲಿತ ಯುವ ಮುಖಂಡ ಲೋಕೇಶ್ 

ಮಲಸಾವರ (ದಾಸನ ಗುಡ್ಡದ) ಗ್ರಾಮಸ್ಥರುಗಳು ಶವ ಸಂಸ್ಕಾರ ಮಾಡುತ್ತಿರುವ ಸರ್ಕಾರಿ ಜಾಗವನ್ನು ಸ್ಮಶಾನ ಭೂಮಿಯಾಗಿ ಹಾಗೂ ಉಳಿಕೆ ಜಾಗವನ್ನು ಇತರೆ ಅಭಿವೃದ್ಧಿ  ಕಾಮಗಾರಿಗಳಿಗೆ  ಮಂಜೂರು ಮಾಡಿಸಿ ಕೊಡುವಂತೆ ಮನವಿ ಸಲ್ಲಿಸಿದ್ದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಗ್ರಾಮದಲ್ಲಿನ ಮೂಲಭೂತ  ಸೌಕರ್ಯಗಳ ಬಗ್ಗೆ ಗಮನ ಹರಿಸಲು ಶೀಘ್ರದಲ್ಲಿ ಭೇಟಿ ನೀಡಿ ಪರಿಶೀಲಾಗುವುದು

 ಮೋಹನ್ ಕುಮಾರ್ ಸಿ.ಎಂ - ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬೇಲೂರು
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News