×
Ad

ಕರ್ನಾಟಕಕ್ಕೆ ಅಮಿತ್ ಶಾ ದಿಢೀರ್ ಭೇಟಿಯ ಹಿಂದಿರುವ ಉದ್ದೇಶವೇನು?: ಕಾಂಗ್ರೆಸ್

Update: 2022-08-03 10:34 IST

ಬೆಂಗಳೂರು: 'ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ದಿಢೀರ್ ಭೇಟಿ ನೀಡುವುದರ ಹಿಂದಿರುವ ಉದ್ದೇಶವೇನು?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್,  'ಕಾನೂನು ಅವ್ಯವಸ್ಥೆಯನ್ನ ಕಣ್ತುಂಬಿಕೊಳ್ಳುವುದಕ್ಕೋ? ICU ನಲ್ಲಿರುವ ಬಿಜೆಪಿ ಪಕ್ಷದ ಕೊನೆಯ ದರ್ಶನ ಮಾಡುವುದಕ್ಕೋ? ಬಿಜೆಪಿಗೆ ಇನ್ನಷ್ಟು 'ಶವ ರಾಜಕೀಯ'ದ ಟಾಸ್ಕ್ ಕೊಡುವುದಕ್ಕೋ? ಕದ್ದುಮುಚ್ಚಿ ಆಗಮಿಸುತ್ತಿರುವುದರ ಹಿಂದಿನ ಅಜೆಂಡಾವೇನು?' ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. 

ಅಮಿತ್ ಶಾ ಅವರು ಆಗಸ್ಟ್ 3 ಹಾಗೂ 4ರಂದು ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಬುಧವಾರ ಬೆಂಗಳೂರಿನ ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News