×
Ad

ಮುಂಡಗೋಡ | ಗ್ರಾಪಂ ಸದಸ್ಯೆಯ ಕೊಲೆ

Update: 2022-08-03 14:52 IST

ಮುಂಡಗೋಡ, ಆ.3: ಮುಂಡಗೋಡ ತಾಲೂಕು ಪಾಳಾ ಗ್ರಾಮ ಪಂಚಾಯತ್ ಸದಸ್ಯೆ ಅಕ್ಕಮ್ಮ ಬಸವರಾಜ ಮೇಲಿನಮನಿಯನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮನೆಯ ಆವರಣದಲ್ಲೇ ಅಕ್ಕಮ್ಮರ ಮೃತದೇಹ ಪತ್ತೆಯಾಗಿದ್ದು, ಮಧ್ಯರಾತ್ರಿ ನಂತರ ಕೊಲೆ ನಡೆದಿರುವ   ಶಂಕೆ ವ್ಯಕ್ತವಾಗಿದೆ.

ಈ ನಡುವೆ ಅಕ್ಕಮ್ಮರ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನೆ ಪತ್ನಿಯನ್ನು ಕೊಲೆಗೈದು ಯತ್ನಿಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಅಕ್ಕಮ್ಮ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News