ನನ್ನ- ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವು ಒಟ್ಟಾಗಿದ್ದೇವೆ: ಸಿದ್ದರಾಮಯ್ಯ

Update: 2022-08-03 11:41 GMT

ದಾವಣಗೆರೆ, ಆ.3: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನ್ನ ಮಧ್ಯೆ ಯಾವುದೇ ಭಿನಾಭಿಪ್ರಾಯವಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. 

ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕರರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, 'ನನ್ನ- ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ, ನಾವು ಒಟ್ಟಾಗಿದ್ದೇವೆ. ನಮ್ಮ ಮಧ್ಯೆ ಬಿರುಕಿ ಇದೆ ಎಂದು ಬಿಂಬಿಸಲಾಗುತ್ತಿದೆ. ಅದೆಲ್ಲ ವಿರೋಧಿಗಳ ಪಿತೂರಿ' ಎಂದು ಎಂದು ಕಿಡಿಗಾರಿದರು. 

'ರಾಜ್ಯದಲ್ಲಿರುವ ಈ ಕೋಮುವಾದಿ ಸರಕಾರವನ್ನು ಕಿತ್ತೊಗೆದು ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ನನಗೆ ನೀವೆಲ್ಲ ಶುಭಕೋರುವುದರ ಮೂಲಕ ಶಪಥ ಮಾಡಬೇಕಿದೆ' ಎಂದು ಹೇಳಿದರು. 

'2024ರಲ್ಲಿ ಮತ್ತೆ ಕಾಂಗ್ರಸ್ ಪಕ್ಷಕ್ಕೆ ಅಧಿಕಾರಕ್ಕೆ ಬರುತ್ತೆ. ರಾಹುಲ್ ಗಾಂಧಿ ಅವರು ಈ ದೇಶದ ಆಶಾ ಕಿರಣ. ಅವರು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಲು ಅರ್ಹ ವ್ಯಕ್ತಿ' ಎಂದು ನುಡಿದರು. 

ಬಿಜೆಪಯವರ ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಕನಸು ನನಸಾಗಲ್ಲ. ಸಂವಿಧಾನವನ್ನು ಬದಲಾವಣೆ ಮಾಡಲಿಕ್ಕೆ ಈ ದೇಶದ ಜನರು ಬಿಡಲ್ಲ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News