ಬಿಬಿಎಂಪಿ ವಾರ್ಡ್ ಮೀಸಲು ಪಟ್ಟಿ ಪ್ರಕಟಿಸಲು ನೀಡಿದ್ದ ಗಡುವು ಆ.4ರಂದು ಮುಕ್ತಾಯ

Update: 2022-08-03 12:57 GMT

ಬೆಂಗಳೂರು, ಆ.3: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 243 ವಾರ್ಡ್‍ಗಳ ಮೀಸಲಾತಿ ಪಟ್ಟಿ ವಾರದೊಳಗೆ ಅಂತಿಮಗೊಳಿಸಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಗಡುವು ಆ.4ರಂದು ಮುಕ್ತಾಯಗೊಳ್ಳುತ್ತಿರುವ ಬೆನ್ನಲ್ಲೇ  ರಾಜ್ಯ ಸರಕಾರವು ಸರ್ವೋಚ್ಚ ನ್ಯಾಯಾಲಯದ ಮುಂದೆ ಮತ್ತಷ್ಟು ಕಾಲಾವಕಾಶ ಕೋರುವ ಸಾಧ್ಯತೆಯಿದೆ. ಅಲ್ಲದೆ, ಸರಕಾರದಿಂದ ಆ.4ರಂದು ಮೀಸಲಾತಿ ಕರಡು ಪಟ್ಟಿ ಪ್ರಕಟಿಸುವ ಸಾಧ್ಯತೆಯೂ ಇದೆ.

ಕಳೆದ ವಾರ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ನ್ಯಾಯಪೀಠ, ಒಂದು ವಾರದೊಳಗೆ ಬಿಬಿಎಂಪಿ 243 ವಾರ್ಡ್‍ಗಳ ಮೀಸಲಾತಿ ಪಟ್ಟಿ ಅಂತಿಮಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಗಡುವು ನೀಡಿತ್ತು. ಈ ಗಡುವು ಗುರುವಾರ ಮುಕ್ತಾಯಗೊಳ್ಳಲಿದೆ. ಆ.4ರಂದು ಮೀಸಲಾತಿ ಕರಡು ಪ್ರಕಟಿಸುವ ಸಾಧ್ಯತೆಯಿದೆ. 

ಮತ್ತೊಂದು ಕಡೆ ಈವರೆಗೆ ಚುನಾವಣೆ ಕುರಿತ ಪ್ರಕ್ರಿಯೆಗಳನ್ನು ಸುಪ್ರೀಂಕೋರ್ಟ್‍ನ ಮುಂದಿಟ್ಟು ಇನ್ನಷ್ಟು ಕಾಲಾವಕಾಶ ಕೇಳುವ ಸಾಧ್ಯತೆಯಿದೆ. ಒಂದು ವೇಳೆ ಕೋರ್ಟ್ ಮತಷ್ಟು ಸಮಯಾವಕಾಶ ನೀಡಿದರೆ ಚುನಾವಣೆ ಇನ್ನಷ್ಟು ವಿಳಂಬ ಆಗುವ ಎಲ್ಲ ಸಾಧ್ಯತೆಗಳು ಇವೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News