ಸಿದ್ದರಾಮಯ್ಯರನ್ನು 'ಜನರಾಮಯ್ಯ' ಎಂದೂ ಕರೆಯಬಹುದು: ದಿನೇಶ್ ಗುಂಡೂರಾವ್

Update: 2022-08-03 14:43 GMT

ದಾವಣಗೆರೆ: ಮುಂದಿನ ರಾಜಕೀಯದ ದಿಕ್ಕನ್ನೇ ಬದಲಾಯಿಸಲಿದೆ. ಕಾರಣ ಸಿದ್ದರಾಮಯ್ಯರಿಗೆ ನಿಮ್ಮ ಆಶೀರ್ವಾದ ಬೇಕಿದೆ. ಆ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಕರೆ ನೀಡಿದರು.

ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದ ಬಡತನ ರೇಖೆಗಿಂತ ಕೆಳಗಿನ ಜನರು ಹಸಿವಿನಿಂದ ಇರಬಾರದು ಎಂದು ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ  ನೀಡಲಾಯಿತು. ಆ ಮೂಲಕ ಸಿದ್ದರಾಮಯ್ಯ ಅನ್ನರಾಮಯ್ಯ ಆದರು. ಇದೀಗ ಇಲ್ಲಿನ ಜನರನ್ನು ನೋಡಿದರೆ ಅವರನ್ನು ಜನರಾಮಯ್ಯ ಎಂದು ಕರೆಯಬಹುದು. ಕಠೋರ, ನಿರ್ಧಾಕ್ಷಿಣ್ಯವಾಗಿ ನೇರ ಮಾತುಕತೆಯ ಸಾಮರ್ಥ್ಯ ಇರಬೇಕೆಂದರೆ ಪ್ರಾಮಾಣಿಕತೆ, ಪಾರದರ್ಶಕತೆ ಬೇಕು. ಅದು ಸಿದ್ದರಾಮಯ್ಯರಲ್ಲಿ ಇದೆ ಎಂದು ಹೇಳಿದರು,

ಸಿದ್ದರಾಮಯ್ಯರ ಆಡಳಿತದಲ್ಲಿ ಎಲ್ಲಾ ವರ್ಗದ ಜನರಿಗೆ ಉತ್ತಮ ಕೆಲಸ, ಎಲ್ಲಾ ಬಡಜನರಿಗೆ ಯೋಜನೆ ಘೋಷಿಸಿದ ವ್ಯಕ್ತಿ ಸಿದ್ದರಾಮಯ್ಯ. ಪುರೋಹಿತರು ಬಡವರು ಇದ್ದಾರೆ. ಕಾಂಗ್ರೆಸ್ ಪುರೋಹಿತ ವಿರೋಧಿ ಅಲ್ಲ. ಈ ಬಗ್ಗೆ ನಾನು ಸಿದ್ದರಾಮಯ್ಯರ ಗಮನಕ್ಕೆ ತಂದಾಗ, ಅವರಿಗೆ ಅನುದಾನ ನೀಡುವ ಮೂಲಕ ಜಾತಿ, ಮತ ಪಂಥ ಇಲ್ಲದೇ ಎಲ್ಲರನ್ನು ಸಮಾನ ರೀತಿ ನೋಡಿ ಸಾಮಾಜಿಕ ನ್ಯಾಯ ನೀಡಿದ ವ್ಯಕ್ತಿ ಯಾರಾದರೂ ಇದ್ದರೆ ಅವರು ಸಿದ್ದರಾಮಯ್ಯ ಮಾತ್ರ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News