ದೇಶ ವಿಭಜನೆಗಾಗಿ ಅಸಮಾನತೆ ಸೃಷ್ಟಿಸುತ್ತಿರುವ ಬಿಜೆಪಿ: ಮಾಜಿ ಸಚಿವ ಕೃಷ್ಣ ಭೈರೇಗೌಡ
ದಾವಣಗೆರೆ: ಸಮಾನತೆಗಾಗಿ ಐಕ್ಯತೆಗಾಗಿ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಆದರೆ ಬಿಜೆಪಿ ದೇಶ ವಿಭಜನೆ ಮಾಡುತ್ತಿದೆ ಎಂದು ಮಾಜಿ ಸಚಿವ ಕೃಷ್ಣೇಭೈರೇ ಗೌಡ ಹೇಳಿದರು.
ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದು ಜೀವನ ಮಾದರಿ ಹೋರಾಟವೇ ಮಾದರಿ ಸಮಾನತೆಗೆ ಉದಾಹರಣೆ. ಜೀವನದ ಮೂಲಕ ಬುದ್ದ ಬಸವ ಗಾಂಧಿ ತತ್ವ ತೋರಿಸಿದವರು. ಬಿಜೆಪಿ ದೇಶ ವಿಭಜನೆ ಮಾಡುತ್ತಿದೆ ಅಸಮಾನತೆ ಸೃಷ್ಟಿಸುತ್ತದೆ. ಈ ಸಮಯದಲ್ಲಿ ಸಿದ್ದರಾಮಯ್ಯ ಬದುಕೇ ನಮಗೆ ದಾರಿದೀಪ, ಸ್ಪೂರ್ತಿಯಾಗಿದೆ ಎಂದರು.
ಭಾರತದ ಮಣ್ಣಿನಲ್ಲಿ ಜನ್ಮಿಸಿದ ಮಹನೀಯರು ಸಮಾನತೆ ತರಲು ಪ್ರಯತ್ನ ಮಾಡಿದವರು ಸಮಾನತೆ ಸುಧಾರಣೆ ಮಾಡುವುದಾಗಿದೆ ಎಂದರು.
ಮಾಜಿ ಸಿಎಂ ವೀರಪ್ಪ ಮೊಯಿಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸಂಭ್ರಮದ ದಿನ. ಬಡವರ ರೈತರ ದಲಿತರ ಸಂಭ್ರಮದ ದಿನ. ಇದೊಂದು ಅಭೂತಪೂರ್ವ ಸಮಾರಂಭವಾಗಿದೆ. ಸಿದ್ದರಾಮಯ್ಯಗೆ ಸಾವಿರ ಆನೆ ಬಲ ಬಂದಿದೆ. ಬೆಣ್ಣೆ ನಗರಿಯಲ್ಲಿ ದೊಡ್ಡ ಮಟ್ಟದ ಕಹಳೆ. ರಾಜ್ಯ ರಾಜಕೀಯದ ದಿಕ್ಸೂಚಿ. ರಾಜ್ಯದಲ್ಲಿ ಊದಿದ ಕಹಳೆ ದೇಶದಲ್ಲೇ ಮೊಳಗಲಿದೆ. ಮುಂಬರುವ ಚುನಾವಣೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲೂ ಕಾಂಗ್ರೆಸ್ ಗೆಲ್ಲಿಸಬೇಕು ಎಂದರು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಮಾತನಾಡಿ, ದಾವಣಗೆರೆ ಸಂಭ್ರಮದಲ್ಲಿದೆ. ಕರ್ನಾಟಕದ ಮಧ್ಯಭಾಗದಲ್ಲಿ ದಾವಣಗೆರೆ ಇದೆ. ಇಲ್ಲಿ ಚುನಾವಣೆಯ ಪ್ರಚಾರ ಹಿಂದೆಯೂ ನಡೆದಿತ್ತು. ದಾವಣಗೆರೆಯಲ್ಲಿ ಸೋನಿಯಾಗಾಂಧಿಯವರು ಚುನಾವಣೆ ಪ್ರಚಾರ ಮಾಡಿದ್ದರು ಆಗ ಮನಮೋಹನ್ ಸಿಂಗ್ ಪ್ರದಾನಿ ಆಗಿದ್ದರು. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ದಾವಣಗೆರೆ ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ. 10 ಲಕ್ಷಕ್ಕೂ ಹೆಚ್ಚು ಜನ ಬಂದಿದ್ದಾರೆ. ದಾವಣಗೆರೆಯಲ್ಲಿ ಉತ್ಸವ ಯಶಸ್ವಿಯಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.