ಸಿದ್ದರಾಮಯ್ಯರ ಬದುಕು, ಸಿದ್ಧಾಂತಗಳು ಎಲ್ಲರಿಗೂ ಮಾದರಿ: ಯು.ಟಿ.ಖಾದರ್
Update: 2022-08-03 20:51 IST
ದಾವಣಗೆರೆ: 'ಡಾ.ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಆಶಯದಂತೆ ಆಡಳಿತ ಮಾಡಿದವರು ಸಿದ್ದರಾಮಯ್ಯ. ಅವರ ಬದುಕು, ಸಿದ್ಧಾಂತಗಳು, ಅವರು ನೀಡಿದ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ’ ಎಂದು ವಿಧಾನಸಭೆ ವಿಪಕ್ಷ ಉಪ ಮಾಶಯಕ ಮುಖಂಡ ಯು.ಟಿ.ಖಾದರ್ ಹೇಳಿದರು.
ದಾವಣಗೆರೆಯಲ್ಲಿ ಆಯೋಜಿಸಲಾಗಿದ್ದ ಸಿದ್ದರಾಮಯ್ಯರ 75ನೇ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ರಾಜ್ಯದ ಸಂಪತ್ತು ಕೆಲವರಿಗಷ್ಟೇ ಸೇರದೇ ಸರ್ವಜನಾಂಗಕ್ಕೂ ಸೇರಬೇಕು ಎಂದು ಯೋಜನೆಗಳನ್ನು ರೂಪಿಸಿದವರು ಸಿದ್ದರಾಮಯ್ಯ ಎಂದರು.
ನಾವು ಹುಟ್ಟುವಾಗ ಕೇವಲ ಉಸಿರು ಇಟ್ಟುಕೊಂಡು ಬರುತ್ತೇವೆ. ಆಗ ಹೆಸರು ಇರಲ್ಲ. ಹುಟ್ಟಿದ ನಂತರ ನಾವು ಹೆಸರು ಇಟ್ಟುಕೊಳ್ಳುತ್ತೇವೆ. ಅಂತಯೇ ನಾವು ಸಾಯುವಾಗ ಉಸಿರು ಇರಲ್ಲ. ಹೆಸರು ಮಾತ್ರ ಇರುತ್ತದೆ. ಆ ರೀತಿ ಬದುಕಿ ತೋರಿಸಬೇಕು. ಅದೇ ರೀತಿ ಸಿದ್ದರಾಮಯ್ಯರಿಗೆ ಅಧಿಕಾರ ಸಿಕ್ಕಾಗಗೆಲ್ಲಾ ರಾಜ್ಯದ ಜನತೆ ಪರವಾಗಿ ಕೆಲಸ ಮಾಡಿದ್ದಾರೆ ಎಂದರು.