'ಬಿಜೆಪಿ ಕಾರ್ಯಕರ್ತರ ಆಕ್ರೋಶ ತಣಿಸಲು ಅಮಿತ್ ಶಾ ದಿಢೀರ್ ಭೇಟಿ': ಕಾಂಗ್ರೆಸ್
ಬೆಂಗಳೂರು, ಆ.4 : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು (ಗುರುವಾರ) ಬೆಳಗಿನ ಜಾವ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಅವರು ಇಂದು ನಗರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಅಮಿತ್ ಶಾ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಅನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, '' ಸಿಎಂಗೆ ಸಮರ್ಪಕ ಮಾಹಿತಿಯೇ ಇಲ್ಲದೆ ಕಾರ್ಯಕರ್ತರ ಆಕ್ರೋಶ ತಣಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಿಡೀರ್ ಭೇಟಿ ಕೊಡುತ್ತಿರುವುದು ಬಿಜೆಪಿಯಲ್ಲಿ ಆತಂಕೋತ್ಸವ, ಅಂತ್ಯೋತ್ಸವ, ಆಕ್ರೋಶೋತ್ಸವಗಳು ನಡೆಯುತ್ತಿರುವುದಕ್ಕೆ ನಿದರ್ಶನ! ಭೇಟಿ ಹಿನ್ನೆಲೆಯಲ್ಲಿ ಸಿಎಂ ಸಪ್ಪೆ ಮುಖ ಹಾಕಿರುವುದಕ್ಕೆ ರಹಸ್ಯವೇನು? '' ಎಂದು ಪ್ರಶ್ನಿಸಿದೆ.
ಇದನ್ನೂ ಒದಿ: ಬೆಂಗಳೂರಿಗೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಆಗಮನ
''ಬಿಜೆಪಿ ಸರ್ಕಾರಕ್ಕೆ ಕರಾವಳಿಯಲ್ಲಿ ಕೊಲೆಗಳಾಗುವ ಮಾಹಿತಿ ಇರುವುದಿಲ್ಲ, ಗೃಹ ಸಚಿವರ ಮನೆಗೆ ABVP ದಾಳಿಯ ಮಾಹಿತಿ ಇರುವುದಿಲ್ಲ, ಕೇಂದ್ರ ಗೃಹಸಚಿವರ ರಾಜ್ಯ ಭೇಟಿಯ ಮಾಹಿತಿಗೆ ಪತ್ರಿಕಾ ವರದಿಗಳ ಆಶ್ರಯ. ರಾಜ್ಯದಲ್ಲಿ ಗುಪ್ತಚರ ಇಲಾಖೆ ಎನ್ನುವುದೊಂದಿತ್ತು, ಅದು ಈಗಲೂ ಅಸ್ತಿತ್ವದಲ್ಲಿದೆಯೇ ಎಂಬ ಅನುಮಾನ ಹುಟ್ಟುತ್ತಿದೆ!'' ಎಂದು ಕಾಂಗ್ರೆಸ್ ರಾಜ್ಯ ಸರಕಾರದ ವಿರುದ್ಧ ಕಿಡಿಗಾರಿದೆ.
ಸಿಎಂಗೆ ಸಮರ್ಪಕ ಮಾಹಿತಿಯೇ ಇಲ್ಲದೆ ಕಾರ್ಯಕರ್ತರ ಆಕ್ರೋಶ ತಣಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಧಿಡೀರ್ ಭೇಟಿ ಕೊಡುತ್ತಿರುವುದು ಬಿಜೆಪಿಯಲ್ಲಿ
— Karnataka Congress (@INCKarnataka) August 4, 2022
ಆತಂಕೋತ್ಸವ, ಅಂತ್ಯೋತ್ಸವ, ಆಕ್ರೋಶೋತ್ಸವಗಳು ನಡೆಯುತ್ತಿರುವುದಕ್ಕೆ ನಿದರ್ಶನ!
ಭೇಟಿ ಹಿನ್ನೆಲೆಯಲ್ಲಿ ಸಿಎಂ ಸಪ್ಪೆ ಮುಖ ಹಾಕಿರುವುದಕ್ಕೆ ರಹಸ್ಯವೇನು @BJP4Karnataka?#BombeBommai