×
Ad

ಮಲ್ಲಿಕಾರ್ಜುನ ಖರ್ಗೆಗೆ ಈ.ಡಿ ಸಮನ್ಸ್; ಬಿಜೆಪಿಯದ್ದು ಸೇಡಿನ ರಾಜಕೀಯ ಎಂದ ಸಿದ್ದರಾಮಯ್ಯ

Update: 2022-08-04 22:12 IST
ಫೈಲ್ ಚಿತ್ರ - ಸಿದ್ದರಾಮಯ್ಯ 

ಬೆಂಗಳೂರು: ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗುರುವಾರ  ಜಾರಿ ನಿರ್ದೇಶನಾಲಯವು (ಈ.ಡಿ) ಸಮನ್ಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ''ಬಿಜೆಪಿ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಸೇಡಿನ ರಾಜಕೀಯವನ್ನು ಮುಂದುವರಿಸಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ.ಡಿ ಕರೆಸಿದೆ. ಇದು ಸಂಸತ್ತಿನ ಅಧಿವೇಶನಕ್ಕೆ ಅಡ್ಡಿಪಡಿಸಲು ಮತ್ತು ತನ್ನ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯ ತಂತ್ರ'' ಎಂದು  ಕಿಡಿಗಾರಿದ್ದಾರೆ.

'ನ್ಯಾಷನಲ್ ಹೆರಾಲ್ಡ್‌ ಪ್ರಕರಣ ಸಂಬಂಧ ರಾಜ್ಯಸಭಾ ವಿರೋಧ‌ಪಕ್ಷದ‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿವೇಶನ ನಡೆಯುವಾಗಲೇ ED ಸಮನ್ಸ್ ನೀಡಿರುವುದು ಸಂಸತ್ತಿನ ಇತಿಹಾಸದಲ್ಲಿ ಅತ್ಯಂತ ನಾಚಿಕೆಗೇಡಿನ ಸಂಗತಿ. BJP ದ್ವೇಷ ರಾಜಕೀಯಕ್ಕೆ ಹಿಡಿದ ಕನ್ನಡಿ ಇದು. ಬದಲಿಸಬೇಕಿರುವುದು 'ಡಿಪಿ'ಯನ್ನೋ‌ ಅಥವಾ ಸರ್ಕಾರವನ್ನೋ? ಯೋಚನೆ‌ ಮಾಡಿ'

ಡಿ.ಕೆ ಶಿವಕುಮಾರ್ , ಕೆಪಿಸಿಸಿ ಅಧ್ಯಕ್ಷರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News