×
Ad

ರಾಜ್ಯ ಸರಕಾರಿ ನೌಕರರ ವೇತನ, ಭತ್ತೆ ಹೆಚ್ಚಿಸಿ ಸರಕಾರ ಆದೇಶ

Update: 2022-08-04 22:22 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ. 4: ‘ರಾಜ್ಯ ಸರಕಾರಿ ನೌಕರರಿಗೆ ಆರನೆ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಇದೇ ತಿಂಗಳ 1ರಿಂದ ಜಾರಿಗೆ ಬರುವಂತೆ ವೇತನ, ಭತ್ತೆ ಹೆಚ್ಚಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ.

2018ರಲ್ಲಿ ಆರನೇ ವೇತನ ಆಯೋಗ ರಚನೆ ಮಾಡಿದ್ದು, ಸರಕಾರಿ ನೌಕರರ ವೇತನ ಹಾಗೂ ಭತ್ಯೆಗಳನ್ನು ಮೇಲ್ದರ್ಜೆಗೇರಿಸುವಂತೆ ಶಿಫಾರಸು ಮಾಡಿತ್ತು.ಆ ಹಿನ್ನೆಲೆಯಲ್ಲಿ ಸರಕಾರ ಆ ಶಿಫಾರಸು ಜಾರಿ ಸಂಬಂಧ ಸಮಿತಿಯೊಂದನ್ನು ರಚಿಸಿತ್ತು.ಸಮಿತಿ ವರದಿ ನೀಡಿದ್ದು, ಅದರಂತೆ ಇದೀಗ ಸರಕಾರಿ ನೌಕರರ ವೇತನ, ಭತ್ತೆ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ.

ಪುರಾತತ್ವ ಹಾಗೂ ಮ್ಯೂಸಿಯಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಬಕಾರಿ, ಅರಣ್ಯ, ಪೊಲೀಸ್, ವಿಧಿ ವಿಜ್ಞಾನ ಪ್ರಯೋಗಾಲಯ, ಕಾರ್ಮಿಕ, ಕಾನೂನು ಮಾಪನ ಶಾಸ್ತ್ರ, ಮುದ್ರಣ ಹಾಗೂ ಪ್ರಕಾಶನ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಆಶ್ರಮ ಶಾಲೆ ಉಪನ್ಯಾಸಕರು, ಸರ್ವೆ ಹಾಗೂ ಭೂ ದಾಖಲೆ ಇಲಾಖೆಯೂ ಸೇರಿ 11 ಇಲಾಖೆಗಳ ವಿವಿಧ ಹಂತದ ಅಧಿಕಾರಿ-ಸಿಬ್ಬಂದಿಯ ವೇತನ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸಲಾಗಿದೆ.

ಉಳಿದ ಇತರೆ ಇಲಾಖೆಗಳ ಹಾಗೂ ವಿವಿಧ ಹಂತದ ಸರಕಾರಿ ಅಧಿಕಾರಿಗಳ ಮತ್ತು ನೌಕರರ ವೇತನ ಹಾಗೂ ವಿಶೇಷ ಭತ್ಯೆಗಳನ್ನು ಮೇಲ್ದರ್ಜೆಗೇರಿಸುವ ಆರನೇ ವೇತನ ಆಯೋಗದ ಶಿಫಾರಸನ್ನು ರಾಜ್ಯ ಸರಕಾರರ ಒಪ್ಪಿಗೆ ನೀಡಿಲ್ಲ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News