×
Ad

ಯುವ ಪೀಳಿಗೆಯಲ್ಲಿ ದುಶ್ಚಟಗಳು ದೂರಾಗಿ ರಾಷ್ಟ್ರಭಕ್ತಿ ಜಾಗೃತಗೊಳ್ಳಲಿ: ಮಲ್ಲಿಕಾರ್ಜುನ ತುಬಾಕಿ

Update: 2022-08-05 00:00 IST

ಬಾಗಲಕೋಟೆ: ಯುವ ಪೀಳಿಗೆಯಲ್ಲಿ ದುಶ್ಚಟ, ದುವ್ರ್ಯಸನಗಳು ದೂರವಾಗಿಸಿ, ರಾಷ್ಟ್ರಭಕ್ತಿ, ರಾಷ್ಟ್ರಧರ್ಮದ ಜಾಗೃತಿ ತೀರ್ವಗೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಕಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆ, ಆರೋಗ್ಯ, ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ಜಿಲ್ಲಾಡಳಿತ ಭವನದ ಆಡಿಟೋರಿಯಮ್ ಹಾಲ್‍ನಲ್ಲಿ  ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,  ಇಲಕಲ್ ನ ಲಿಂಗೈಕ್ಯ ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಮಾಡಿದ್ದು ಅತ್ಯಂತ ಮಹತ್ವಾದ್ದಾಗಿದೆ. ಈ ನಮ್ಮ ನಾಡು ಸಾಧು, ಸಂತರು, ಶಿವಯೋಗಿಗಳ ನಾಡಾಗಿದೆ. ಗುರು ಹಿರಿಯರು ತೋರಿದ ಸನ್ಮಾರ್ಗದಲ್ಲಿ ನಾವೇಲ್ಲರೂ ನಡೆಯಬೇಕಿದೆ. ಬಸವನಾಡಿನಲ್ಲಿ ಶರಣರ ತತ್ವ ಆದರ್ಶಗಳನ್ನೇಲ್ಲ ಮುನ್ನಡೆಸಿಕೊಂಡು ಶಾಂತಿಯುತ ಸಮಾನತ್ವದ ಸಮಾಜ ನಿರ್ಮಾಣ ಕಾರ್ಯ ಇಂದಿನ ಯುವ ಜನತೆಯ ಜವಾಬ್ದಾರಿಯಾಗಿದೆ. ವ್ಯಸನ ಮುಕ್ತ ದಿನಾಚರಣೆ ಪ್ರಯುಕ್ತ ಇಂದು ಕೈಗೊಡಂತಹ  ದುಶ್ಚಟಗಳಿಂದ ದೂರವಿರುತ್ತೆವೆ ಎಂಬ ಪ್ರತೀಜ್ಞಾ ವಿಧಿಯನ್ನು ಯುವ ಜನತೆ ತಮ್ಮ ಜೀವನದ ಕೊನೆಯ ವರೆಗೂ ಪಾಲಿಸುವಂತಾಗಬೇಕು ಎಂದು ಅವರು ಕರೆ ನೀಡಿದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಇಲಕಲ್ ನ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಪೂಜ್ಯ ಶ್ರೀ ಮ.ನಿ.ಪ್ರ. ಗುರುಮಹಾಂತ ಸ್ವಾಮಿ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ಮನೆ ಹಾಗೂ ಸುತ್ತಲಲಿರುವವರ ದುಶ್ಚಟಗಳನ್ನು ಬಿಡಿಸಲು ಮುಂಣದಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಹಾಂತ ಗುರುಗಳು ಹಾಕಿ ಕೊಟ್ಟ ಮಾರ್ಗದಲ್ಲಿ ಮುನ್ನೆಡೆಯಬೇಕು. ಪೂಜ್ಯ ಮಹಾಂತ ಶಿವಯೋಗಿಗಳು ಮಹಾಂತ ಜೋಳಿಗೆ’ ಯ ಮೂಲಕ ವ್ಯಸನ ಮುಕ್ತ ವ್ಯಕ್ತಿ, ಕುಟುಂಬ, ಸಮಾಜ ಗ್ರಾಮಗಳು ನಿರ್ಮಾಣವಾಗಬೇಕೆಂಬ ಸದ್ದುದ್ದೇಶದಿಂದ ಕಾರ್ಯಕ್ರಮ ಹಾಕಿಕಕೊಳ್ಳುವುದರ ಜೊತೆಗೆ ಜನತೆಗೆ ಸರಿಯಾದ ತಿಳುವಳಿಕೆ ಉಂಟಾಗಬೇಕೆಂದು ಶರಣ ಸಿದ್ದಾಂತ ಪೀಠದ ಶಿವಾನುಭವ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದರು. ಇಂತಹ ಶಿಬಿರಗಳು ದೇಶದೆಲ್ಲಡೆ ಜರುಗಬೇಕಾಗಿವೆ ಎಂದರು. 

ಖ್ಯಾತ ಉಪನ್ಯಾಸಕಾರ ಸಿದ್ದಣ್ಣ ಲಂಗೂಟಿ ಅವರು ಮಾತನಾಡಿ, ಇತ್ತರಗಿ ಪೀಠದ ಮಹಾಂತ ಸ್ವಾಮಿಗಳು ಹಿಡಿದ ಜೋಳಿಗೆ ಕಣ್ಣಿಗೆ ಕಾಣದ ಒಂದು ವಿನೂತನ ಜೋಳಿಗೆಯಾಗಿತ್ತು. ಇತರ ಮಠಾಧೀಶರು ದವಸ ಧಾನ್ಯ ದುಡ್ಡು ಕಾಸು ಕೇಳಿದರೆ, ಮಹಾಂತ ಗುರುಗಳು ವ್ಯಕ್ತಿ, ಕುಟುಂಬ, ಸಮಾಜ ದೇಶ ಹಾಳು ಮಾಡುವಂತಹ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಬಿಕ್ಷೆ ಬೇಡಿ ಜನರ ಮನ ಪರಿವರ್ತಿಸಿದ ಸಮಾಜ ಸುಧಾರಕರಾಗಿದ್ದರು. ಜಾತಿ ಮತ, ಪಂಥ, ಪಂಗಡ ಧರ್ಮ ಭಾಷೆವೆನ್ನದೇ ಇಡೀ ಪ್ರಪಂಚವನ್ನೇ ಸುತ್ತಾಡಿ  ಅಖಂಡ 42 ವರ್ಷ ಕಾಲ ವ್ಯಸನಗಳನ್ನು ಬಿಕ್ಷೆ  ಬೇಡಿ, ದೀನ ದಲಿತರ ಬಾಳಿಗೆ ಹೊಸ ಬೆಳಕಾಗಿದ್ದರು ಎಂದರು.   ಮಾನಸಿಕ ಆರೋಗ್ಯ ತಜ್ಞ ಡಾ. ನಾರಾಯಣ ಮುತಾಲಿಕ ಅವರು ಬೀಡಿ ಸಿಗರೇಟ್, ತಂಬಾಕು ಉತ್ಪನ್ನ, ಮದ್ಯಪಾನದಂತಹ  ದುಶ್ಚಟಗಳಿಂದಾಗುವ ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ವ್ಯಸನ ಮುಕ್ತ ದಿನಾಚರಣೆಯ ಪ್ರಮುಖ ರೂವಾರಿ ಜಿ. ಎಸ್ ಗೌಡರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯ ಸರಕಾರವು ಲಿಂಗೈಕ್ಯ ಮಹಾಂತ ಗುರುಗಳ ಜನ್ಮ ದಿನವನ್ನು ವ್ಯಸನ ಮುಕ್ತ ದಿನಾಚರಣೆಯನ್ನಾಗಿ ಮಾಡಿರುವುದು ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಮಾಡಿದಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಇಳಕಲ್ ನ ಮಹಾಂತೇಶ ಗಜಜೇಂದ್ರಗಡ ಹಾಗೂ ತಂಡದಿಂದ ಪ್ರದರ್ಶಿತವಾದ ಮಹಾಂತ ಜೋಳಿಗೆ ಎಂಬ ಕಿರು ನಾಟಕ ಜನಮನ ಸೆಳೆಯಿತು. ನಂತರ ಪ್ರೋ. ಸಿದ್ದಣ್ಣ ಲಂಗೋಟಿ ಅವರು ರಚಿಸಿದ ಮಹಾಂತ ಜೋಳಿಗೆ ವ್ಯಸನ ಮುಕ್ತ ಆಂದೋಲನ ಪುಸ್ತಕ ಬಿಡುಗಡೆ ಮಾಡಲಾಯಿತು  ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ ಸ್ವಾಗತಿಸಿದರು. ಜಾಸ್ಮೀನ್ ಕಿಲ್ಲೇದಾರ ನಿರೂಪಿಸಿದರು. 

ಈ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶ ಶರಣಪ್ಪ, ಡಿ ವಾಯ್ ಎಸ್ ಪಿ ಭರತ ತಳವಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಇತರರು ಇದ್ದರು. 

ವ್ಯಸನ ಮುಕ್ತ ದಿನಾಚರಣೆಯ ಪ್ರಯುಕ್ತ ಗುರುವಾರ ಜಿಲ್ಲಾಡಳಿತ ಭವನ ಆವರಣದಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ದುಶ್ಚಟಗಳಿಂದ ಉಂಟಾಗುವ ದುಷ್ಟಪರಿಣಾಮಗಳ ಕುರಿತಾದ ಜಾಗೃತಿ ಜಾಥಾ ವಾಹನಕ್ಕೆ ಚಾಲನೆ ನೀಡಿದರು. ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳು ವ್ಯಸನದ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News