ಸಿಂದಗಿ: ರಾಷ್ಟ್ರಧ್ವಜಕ್ಕೆ ಅವಮಾನ ಖಂಡಿಸಿ ಪ್ರತಿಭಟನೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

Update: 2022-08-05 16:48 GMT

ಸಿಂದಗಿ:  ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ರೀತಿಯಲ್ಲಿ ಬಾವುಟಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದಲ್ಲಿ ಶುಕ್ರವಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. 

'ಭಾರತಕ್ಕೆ ಸ್ವಾತಂತ್ರ್ಯ ಬಂದು 15 ವರ್ಷಗಳು ಆಗಿರುವುದರ ಹಿನ್ನೆಲೆ ಸರಕಾರ ಆಚರಿಸುತ್ತಿರುವ ಅಮೃತ ಮಹೋತ್ಸವದಲ್ಲಿ ಮನೆ ರಾಷ್ಟ್ರಧ್ವಜ ಹಾರಿಸುವ ಅಭಿಯಾನ ಹಮ್ಮಿಕೊಂಡಿದ್ದು, ಇದು ಉತ್ತಮ ವಿಚಾರ. ಆದರೆ, ಸಂಪೂರ್ಣ ನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿಯಾಗಿ ತಯಾರಿಸಿರುವ ರಾಷ್ಟ್ರಧ್ವಜಗಳನ್ನು  ಮನೆ ಮನೆಗೂ ವಿತರಿಸುತ್ತಿದ್ದಾರೆ. ರಾಷ್ಟ್ರಧ್ವಜದ ಅಳತೆ 2-3 ಇರಬೇಕು, ಆದರೆ ಸರಕಾರದ ವತಿಯಿಂದ ವಿತರಿಸುತ್ತಿರುವ ರಾಷ್ಟ್ರಧ್ವಜ ಇವು ಯಾವ ಮಾನದಂಡವನ್ನು ಒಳಗೊಂಡಿಲ್ಲ. ಹರಿದ ರಾಷ್ಟ್ರಧ್ವಜವನ್ನು ಹಾಗೂ ಕೇಸರಿ, ಬಿಳಿ, ಹಸಿರು ಇವುಗಳ ಅಳತೆ ಸಹ ಸರಿಯಾಗಿಲ್ಲ, ಇನ್ನು ಧ್ವಜದ ನಡುವೆ ಇರುವ ಆಶೋಕ ಚಕ್ರ ವೃತ್ತಾಕಾರವಿರದೆ, ಅಂಡಾಕಾರವಾಗಿ ರಚಿಸಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನವಾಗಿದೆ. ನಿಯಮಬದ್ಧವಲ್ಲದ ರಾಷ್ಟ್ರಧ್ವಜವನ್ನು ವಿತರಿಸುವುದು ಈ ಕೂಡಲೇ ಕೈಬಿಡಬೇಕು' ಎಂದು ಪ್ರತಿಭನಟನಾಕರರು ಆಗ್ರಹಿಸಿದರು.

'ಹತ್ತಿ ಅಥವಾ ಖಾದಿಯ ರಾಷ್ಟ್ರಧ್ವಜದ ಜೊತೆಗೆ ಇತ್ತೀಚೆಗೆ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆಯಲ್ಲಿ ಕೂಡ ಧ್ವಜ ತಯಾರಿಕೆಗೆ ಅನುಮತಿ ಕೊಟ್ಟಿದೆ. ಇದು ಸ್ಥಳೀಯ ಖಾದಿ ಗ್ರಾಮೋದ್ಯೋಗಕ್ಕೆ ಹೊಡೆತ ಕೊಡುತ್ತದೆ, ಅಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಜನರ ಅನ್ನವನ್ನು ಸರಕಾರ ಕಸಿದಂತೆ ಆಗುತ್ತದೆ. ಹಾಗಾಗಿ ಸರಕಾರ ಖಾದಿ ಹಾಗೂ ಹತ್ತಿಯ ಬಟ್ಟೆಯಲ್ಲಿಯೇ ರಾಷ್ಟ್ರಧ್ವಜ ಹಾರಿಸಬೇಕು ಎನ್ನುವ ನಿಯಮವನ್ನು ಜಾರಿಮಾಡಬೇಕು, ಈಗ ತಂದಿರುವ ತಿದ್ದುಪಡಿ ಕಾಯ್ದೆ ವಾಪಾಸ್ ಪಡೆಯಬೇಕು' ಎಂದು ಒತ್ತಾಯಿಸಿದರು.

ರಾಷ್ಟ್ರಧ್ವಜ ನಿಯಮಾವಳಿ ಪ್ರಕಾರ ತಯಾರಿಸದೆ ಮಾರಾಟ ಮಾಡುತ್ತಿರುವ  ಹಾಗೂ ಅದನ್ನು ಪರಿಶೀಲಿಸದೆ ವಿತರಿಸುತ್ತಿರುವ ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News