×
Ad

ವಿದ್ಯುತ್ ಸ್ಪರ್ಶದಿಂದ ಸಾವು, ಇಬ್ಬರಿಗೆ ಗಾಯ: 1.28 ಕೋಟಿ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶ

Update: 2022-08-06 12:13 IST

ಬೆಂಗಳೂರು, ಆ.5: ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಕೂಲಿ ಕಾರ್ಮಿಕರೊಬ್ಬರ ಪತ್ನಿ ಹಾಗೂ ಗಾಯಾಳುಗಳಾಗಿರುವ ಇಬ್ಬರು ಅಪ್ರಾಪ್ತ ಸಂತ್ರಸ್ತರಿಗೆ ನೆರವಿಗೆ ಧಾವಿಸಿರುವ ಹೈಕೋರ್ಟ್, ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 1.28 ಕೋಟಿ ಪರಿಹಾರ ನೀಡುವಂತೆ ಕೆಪಿಟಿಸಿಎಲ್ ಹಾಗೂ ಬೆಸ್ಕಾಂಗೆ ನಿರ್ದೇಶಿಸಿದೆ. 

ಹಾಸನ ಜಿಲ್ಲೆಯ ಕಾಫಿ ಎಸ್ಟೇಟ್‌ಯೊಂದರಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದ ಕೂಲಿ ಕಾರ್ಮಿಕರ ಪತ್ನಿ ರೇಖಾ, ಬೆಂಗಳೂರಿನ ಬಾಲಕಿ ಚಂದನಾ(15) ಮತ್ತು ಮುಯಿಝ್ ಅಹ್ಮದ್ ಶರೀಫ್(7) ಅವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ನಿರ್ದೇಶನ ನೀಡಿದೆ. 

ಗಾಯಗೊಂಡಿರುವ ಚಂದನಾಳಿಗೆ 51.76 ಲಕ್ಷ ಪರಿಹಾರ ಹಾಗೂ ಮುಯಿಜ್ ಅಹ್ಮದ್ ಶರೀಫ್‌ಗೆ 50.82 ಲಕ್ಷ ಪರಿಹಾರ ಪಾವತಿಸಲು ಆದೇಶ ಮಾಡಿದೆ. ಹಾಸನ ಜಿಲ್ಲೆಯ ಕಾಫಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದ ಸುಬ್ರಹ್ಮಣ್ಯ ಅವರ ಪತ್ನಿಗೆ 25.52 ಲಕ್ಷ ರೂ.ಪಾವತಿಸಲು ಹೈಕೋರ್ಟ್ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News