×
Ad

ಬಿಜೆಪಿಯವರು ಡೋಂಗಿ ದೇಶ ಭಕ್ತರು: ಸಿದ್ದರಾಮಯ್ಯ ವಾಗ್ದಾಳಿ

Update: 2022-08-06 15:38 IST
(  photo credit- twitter )

ಚಿಕ್ಕಬಳ್ಳಾಪುರ: 'ಸ್ವಾತಂತ್ರ್ಯದ ಹೋರಾಟಕ್ಕಾಗಿ ಆರೆಸ್ಸೆಸ್ ನ ಯಾರಾದರೂ ಬಲಿದಾನ ಆಗಿದ್ದಾರಾ?, ಬಿಜೆಪಿಯವರು ಡೋಂಗಿ ದೇಶ ಭಕ್ತರು' ಎಂದು ವಿಧಾನಸಭೆ ವಿಪಕ್ಷ ನಾಯಕ ಕಿಡಿಗಾರಿದ್ದಾರೆ. 

ಶನಿವಾರ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. 

''ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ನ  ಯಾರೊಬ್ಬರು ಸತ್ತಿಲ್ಲ.  ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡಿದ್ದರೆ, ಅದು ಕಾಂಗ್ರಸ್ ನವರು ಮಾತ್ರ'' ಎಂದು ಹೇಳಿದರು. 

''ಕಾಂಗ್ರಸ್ ನವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿರುವಾಗ ಇದೇ ಆರೆಸ್ಸೆಸ್ ಮತ್ತು ಬಿಜೆಪಿಯವರು ಬ್ರಿಟಿಷರ ಜೊತೆ ಶಾಮೀಲಾಗಿದ್ದರು. ಅನೇಕ ಹೋರಾಟಗಾರರ ಬಂಧನಕ್ಕೆ ಬ್ರಿಟಿಷರಿಗೆ ಆರೆಸ್ಸೆಸ್ ಮತ್ತು ಬಿಜೆಪಿಯವರು ಸಹಾಯ ಮಾಡಿದ್ದರು'' ಎಂದು ಆರೋಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News