ಮೈಸೂರು ದಸರಾಕ್ಕೆ ಹೊರಟ ಕೊಡಗಿನ ಎರಡು ಆನೆಗಳು
Update: 2022-08-06 18:05 IST
ಮಡಿಕೇರಿ ಆ.6 : ಪ್ರಸಕ್ತ ಸಾಲಿನ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಮತ್ತು ಆನೆಕಾಡು ಸಾಕಾನೆ ಶಿಬಿರದಿಂದ ಪ್ರಥಮ ತಂಡವಾಗಿ ಕಾವೇರಿ(47) ಹಾಗೂ ಧನಂಜಯ(42) ಆನೆಗಳನ್ನು ಪೂಜೆ ಸಲ್ಲಿಸುವ ಮೂಲಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೀಳ್ಕೊಟ್ಟರು.
ಈ ಬಾರಿಯ ದಸರಾ ಉತ್ಸವದ ಜಂಬೂಸವಾರಿಯಲ್ಲಿ ದುಬಾರೆ ಮತ್ತು ಆನೆಕಾಡು ಶಿಬಿರದಿಂದ ಒಟ್ಟು 7 ಸಾಕಾನೆಗಳು ಪಾಲ್ಗೊಳ್ಳುತ್ತಿವೆ. ಇಂದು ವೀರನಹೊಸಳ್ಳಿಗೆ ಲಾರಿ ಮೂಲಕ ತೆರಳಿರುವ ಕಾವೇರಿ ಹಾಗೂ ಧನಂಜಯ ಭಾನುವಾರ ಮೈಸೂರಿಗೆ ತಲುಪಲಿವೆ.
ಮೈಸೂರು ದಸರಾದಲ್ಲಿ ಕಾವೇರಿ 12 ಬಾರಿ ಹಾಗೂ ಧನಂಜಯ 5 ಬಾರಿ ಪಾಲ್ಗೊಂಡಿದ್ದಾನೆ.