ಬೆಲೆಯೇರಿಕೆಯ ವಿರುದ್ಧದ ಪ್ರತಿಭಟನೆಯಿಂದ ಶ್ರೀರಾಮನಿಗೆ ಅವಮಾನ ಹೇಗೆ?: ಅಮಿತ್ ಶಾಗೆ ದಿನೇಶ್ ಗುಂಡೂರಾವ್ ಪ್ರಶ್ನೆ

Update: 2022-08-06 14:34 GMT

ಬೆಂಗಳೂರು, ಠಾ.6: 'ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿರುವುದನ್ನು ಅಮಿತ್ ಶಾ ಶ್ರೀರಾಮನಿಗೆ ಆದ ಅವಮಾನ ಎಂದಿದ್ದಾರೆ. ಇದೇನು ಅವರ ಮೂರ್ಖತನವೋ.? ಹತಾಶೆಯೋ‌ ಅರ್ಥವಾಗುತ್ತಿಲ್ಲ. ಇದು ಎಲ್ಲಿಂದೆಲ್ಲಿಯ ಸಂಬಂಧ.? BJPಯವರಿಗೆ, ರಾಮ,ಧರ್ಮ,ಹಿಂದುತ್ವ ಮತ್ತು‌ ಪಾಕಿಸ್ತಾನವನ್ನು ಕನವರಿಸದಿದ್ದರೆ ತಿಂದ ಅನ್ನ ಮೈಗೆ ಹತ್ತುವುದಿಲ್ಲವೆ? ಎಂದು ದಿನೇಶ್ ಗುಂಡೂ ರಾವ್ ಕಿಡಿಗಾರಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ''ಬೆಲೆಯೇರಿಕೆಯಿಂದ ಜನರ ಸಂಕಷ್ಟವನ್ನು ಕಾಂಗ್ರೆಸ್ ಪ್ರತಿಭಟನೆಯ‌ ಮೂಲಕ ವ್ಯಕ್ತಪಡಿಸುತ್ತಿದೆ. ಬೆಲೆಯೇರಿಕೆ ಬಿಸಿ ರಾಮನ ಭಕ್ತರಿಗೂ ತಟ್ಟಿದೆ,ರಹೀಂನ ಭಕ್ತರಿಗೂ ತಟ್ಟಿದೆ. ಜನರ ಧ್ವನಿಯಾಗಿ ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಶಾ ರವರಿಗೆ ನಡುಕ‌ ತಂದಿದೆ. ಹಾಗಾಗಿ ಬೆಲೆಯೇರಿಕೆ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಶ್ರೀರಾಮನ ಮೊರೆ ಹೋಗಿದ್ದಾರೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯು ರಾಮಮಂದಿರ ಶಂಕುಸ್ಥಾಪನೆ ವಿರುದ್ಧವಾಗಿದೆ: ಅಮಿತ್ ಶಾ

''ಅಮಿತ್ ಶಾರವರೆ., ಬೆಲೆಯೇರಿಕೆಯ ವಿರುದ್ಧದ ಪ್ರತಿಭಟನೆ ಶ್ರೀರಾಮನಿಗೆ ಹೇಗೆ ಅವಮಾನ ಮಾಡಿದಂತೆ.? ಇಂತಹ ಅವಿವೇಕದ ಥಿಯರಿಗಳು ನಿಮ್ಮ ತಲೆಯಲ್ಲಿ ಹುಟ್ಟುವುದಾದರೂ ಹೇಗೆ.? ಬೆಲೆಯೇರಿಕೆಯಿಂದ ಜನರು ಅನುಭವಿಸುತ್ತಿರುವ ನೋವು ನಿಮಗಿನ್ನು ಗೊತ್ತಿಲ್ಲ. ಮೂರ್ಖತನದ ಹೇಳಿಕೆ‌‌ ಕೊಡುವುದು ಬಿಟ್ಟು, ಮೊದಲು ಬೆಲೆಯೇರಿಕೆ ನಿಯಂತ್ರಿಸಿ ಆಗ ರಾಮನು ಕೂಡ ಮೆಚ್ಚುತ್ತಾನೆ'' ಎಂದು ದಿನೇಶ್ ಗುಂಡೂ ರಾವ್ ಸಲಹೆ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News