×
Ad

ಕೋಲಾರ: ಆರೆಸ್ಸೆಸ್ ಮುಖಂಡನಿಗೆ ಚಾಕು ಇರಿತ, ಕಾರ್ಯಕರ್ತರಿಂದ ಪ್ರತಿಭಟನೆ

Update: 2022-08-06 20:46 IST
(ಪ್ರತಿಭಟನೆ ನಡೆಸುತ್ತಿರುವ ಕಾರ್ಯಕರ್ತರು)

ಕೋಲಾರ, ಆ.6: ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಬಿಡಿಸಲು ಹೋದ ಆರೆಸ್ಸೆಸ್ ಮುಖಂಡನಿಗೆ ದುಷ್ಕರ್ಮಿಗಳು ಚಾಕು ಇರಿದಿರುವ ಘಟನೆ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಮಾರಿಕಾಂಬ ರಸ್ತೆಯಲ್ಲಿ ಘಟನೆ ನಡೆದಿದ್ದು, ಚಾಕು ಇರಿತದಲ್ಲಿ ಆರೆಸ್ಸೆಸ್ ಮುಖಂಡ ರವಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. 

ಇಂದು ಮಧ್ಯಾಹ್ನ  ಸ್ಟೀಲ್ ಅಂಗಡಿಯೊಂದರ ಮುಂಭಾಗದಲ್ಲಿ ಬೈಕ್  ಪಾರ್ಕಿಂಗ್ ಮಾಡುವ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ರವಿ ಗಲಾಟೆ ಬಿಡಿಸಲು ಹೋಗಿದ್ದರು. ಈ ವೇಳೆ  ಇಬ್ಬರು ವ್ಯಕ್ತಿಗಳು ರವಿಗೆ ಚಾಕುವಿನಿಂದ ಇರಿದಿದ್ದು,  ಇದರಿಂದಾಗಿ ರವಿ ಕೈಗೆ ಮತ್ತು ಕಿವಿಯ ಹಿಂಭಾಗದಲ್ಲಿ ಗಾಯವಾಗಿದೆ ಎನ್ನಲಾಗಿದೆ.

ರವಿಗೆ ಚಾಕು ಇರಿದಿದ್ದನ್ನು ಖಂಡಿಸಿ ಆರೆಸ್ಸೆಸ್ ಮುಖಂಡರು ಮಾಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಚಾಕು ಇರಿದ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News