ರಾಮನಗರ | ಶೆಡ್ ಮೇಲೆ ಕುಸಿದ ಗೋಡೆ: ಇಬ್ಬರು ಪುಟಾಣಿ ಮಕ್ಕಳು ಮೃತ್ಯು
ರಾಮನಗರ, ಆ.7: ಭಾರೀ ಮಳೆಗೆ ಕೊಟ್ಟಿಗೆ ಗೋಡೆ ಕುಸಿದು ಮೈಮೇಲೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಕೂಡ್ಲೂರು ಕ್ರಾಸ್ ಬಳಿ ರವಿವಾರ ಮುಂಜಾನೆ 2 ಗಂಟೆ ಸುಮಾರಿಗೆ ಸಂಭವಿಸಿರುವುದು ವರದಿಯಾಗಿದೆ.
ಇಲ್ಲಿನ ಶೆಡ್ ವೊಂದರಲ್ಲಿ ವಾಸ್ತವ್ಯವಿದ್ದ ನೇಪಾಳ ಮೂಲದ ಫರ್ಬಿನ್(4) ಹಾಗೂ ಇಷಿಕಾ(3) ಮೃತಪಟ್ಟ ಮಕ್ಕಳಾಗಿದ್ದಾರೆ. ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಮಥುರಾದಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ, ಮೂವರ ಬಂಧನ: ಪೊಲೀಸರು
ಸ್ಥಳೀಯ ಹೊಟೇಲ್ ವೊಂದರಲ್ಲಿ ಕೆಲಸ ಮಾಡುತ್ತಿರುವ ನೇಪಾಳ ಮೂಲದ ಎರಡು ಕುಟುಂಬಗಳು ಇಲ್ಲಿನ ಗಂಗರಂಗಮ್ಮ ಎಂಬವರಿಗೆ ಸೇರಿದ ಶೆಡ್ ವೊಂದರಲ್ಲಿ ವಾಸವಿದೆ. ಕಳೆದ ರಾತ್ರಿ ಇವರಿದ್ದ ಶೆಡ್ ಗೆ ತಾಗಿಕೊಂಡಿರುವ ಪಕ್ಕದ ಮನೆಯ ಕೊಟ್ಟಿಗೆಯ ಗೋಡೆ ಏಕಾಏಕಿ ಕುಸಿದು ಶೆಡ್ ಮೇಲೆ ಬಿದ್ದಿದೆ. ಈ ವೇಳೆ ಶೆಡ್ ನಲ್ಲಿ ಮಲಗಿದ್ದ ಎರಡು ಕಂದಮ್ಮಗಳು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿವೆ. ಮೀನಾ ಮತ್ತು ಮೋನಿಷಾ ಎಂಬಿಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕುದೂರು ಪೋಲಿಸ್ ಠಾಣೆ ಪ್ರಕರಣ ದಾಖಲಾಗಿದೆ.