×
Ad

ಪಾವಗಡ | ಬಟ್ಟೆ ಒಗೆಯುತ್ತಿದ್ದ ಮಹಿಳೆ ನೀರುಪಾಲು

Update: 2022-08-07 10:24 IST
ಸಾಂದರ್ಭಿಕ ಚಿತ್ರ (Source: PTI)

ಪಾವಗಡ, ಆ.7: ಬಟ್ಟೆ ಒಗೆಯುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ನೀರಿನ ಹಳ್ಳಕ್ಕೆ ಬಿದ್ದು ಕೊಚ್ಚಿಕೊಂಡು ಹೋಗಿ ನಾಪತ್ತೆಯಾದ ಘಟನೆ ರವಿವಾರ ಬೆಳಗ್ಗೆ ಪಾವಗಡ ತಾಲೂಕಿನ ಬ್ಯಾಡನೂರು ನೀರಿನ ಹಳ್ಳದಲ್ಲಿ ನಡೆದಿರುವುದು ವರದಿಯಾಗಿದೆ.

ನೀರುಪಾಲಾದವರನ್ನು ಗ್ರಾಮದ ಗೋವಿಂದಪ್ಪ ಎಂಬವರ ಪತ್ನಿ ದೇವಿರಮ್ಮ(35) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ರಾಮನಗರ | ಶೆಡ್ ಮೇಲೆ ಕುಸಿದ ಗೋಡೆ: ಇಬ್ಬರು ಪುಟಾಣಿ ಮಕ್ಕಳು ಮೃತ್ಯು

ಬ್ಯಾಡನೂರು ಗ್ರಾಮದಲ್ಲಿ ಇರುವಂತಹ ಶಂಕರಲಿಂಗನಕೆರೆ ಇತ್ತೀಚಿಗೆ ಕೋಡಿ ಬಿದ್ದಿತ್ತು. ಈ ಹಳ್ಳದ ನೀರು ಹರಿಯುವ ಸ್ಥಳದಲ್ಲಿ ದೇವಿರಮ್ಮಇಂದು ಬೆಳಗ್ಗೆ ಬಟ್ಟೆ ಒಗೆಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ನೀರುಪಾಲಾಗಿರುವ ದೇವಿರಮ್ಮರಿಗಾಗಿ ಪಾವಗಡ ಠಾಣೆಯ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಯ ಜೊತೆ ಸ್ಥಳೀಯರೂ ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News