ತಿರಂಗಾ DP ಬದಲಿಸುವ ಪ್ರಧಾನಿ ಕರೆ RSSಗೆ ಅನ್ವಯಿಸುವುದಿಲ್ಲವೇ: ಕಾಂಗ್ರೆಸ್‌ ಪ್ರಶ್ನೆ

Update: 2022-08-08 10:15 GMT

ಬೆಂಗಳೂರು: ಕೇಂದ್ರ ಸರಕಾರದ 'ಹರ್‌ ಘರ್‌ ತಿರಂಗಾ' ಯೋಜನೆಯ ಕುರಿತು ಹಲವಾರು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಸಾಮಾಜಿಕ ತಾಣದಾದ್ಯಂತ ಬಿಜೆಪಿಯ ದ್ವಿಮುಖ ಧೋರಣೆಗಳ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕರ್ನಾಟಕ ಕಾಂಗ್ರೆಸ್‌ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಆರೆಸ್ಸೆಸ್‌ ವಿರುದ್ಧ ವಾಗ್ದಾಳಿ ನಡೆಸಿದೆ. "ಭಾರತೀಯತೆಯನ್ನು ಎಂದಿಗೂ ಒಪ್ಪದ ಆರೆಸ್ಸೆಸ್‌ ಭಾರತದ ತಾಲಿಬಾನ್‌ ಇದ್ದಂತೆ" ಎಂದು ಬಣ್ಣಿಸಿದೆ.

"RSS ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಬಯಸುವ RSS, ಭಾರತದಲ್ಲಿನ ತಾಲಿಬಾನ್ ಇದ್ದಂತೆ. ತಿರಂಗಾ DP ಬದಲಿಸುವ ಪ್ರಧಾನಿ ಕರೆ RSSಗೆ ಅನ್ವಯಿಸುವುದಿಲ್ಲವೇ? ತಿರಂಗಾ ಮೇಲಿನ ಅಸಹನೆ, ದ್ವೇಷ ಸುಪ್ತವಾಗಿ ಮುಂದುವರೆದಿದೆಯೇ? RSS ತಿರಂಗಾ ಒಪ್ಪದಿರುವುದೇಕೆ BJP Karnataka?" ಎಂದು ಪ್ರಶ್ನಿಸಿದೆ.

ಇದನ್ನೂ ಓದಿ: ಕೇಂದ್ರ ಸೇವೆಗೆ ಹೋಗಲು ಬಯಸದ ಹಿರಿಯ ಐಪಿಎಸ್ ಅಧಿಕಾರಿಗಳು !

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News