ರಾಜ್ಯದ ಅಂಚೆ ಕಚೇರಿಗಳಲ್ಲಿ ರಾಷ್ಟ್ರಧ್ವಜ ಮಾರಾಟ

Update: 2022-08-08 18:35 GMT

ಬೆಂಗಳೂರು, ಆ.8: ಎಪ್ಪತ್ತೈದನೆಯ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಅಂಗವಾಗಿ ಪ್ರಾರಂಭಿಸಿದ "ಹರ್ ಘರ್ ತಿರಂಗ" ಅಭಿಯಾನದ ಭಾಗವಾಗಿ ರಾಜ್ಯದ ಅಂಚೆ ಕಚೇರಿಗಳಲ್ಲಿ 7.5 ಲಕ್ಷ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲು ಯೋಜಿಸಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಹರ್ ಘರ್ ತಿರಂಗ ಕಾರ್ಯಕ್ರಮ ಎಲ್ಲಾ ಭಾರತೀಯರಲ್ಲಿ ದೇಶಾಭಿಮಾನ ಮೂಡಿಸುವ ವಿನೂತನ ಕಾರ್ಯಕ್ರಮವಾಗಿದ್ದು, ಇದರಲ್ಲಿ ಎಲ್ಲಾ ಭಾರತೀಯರು ಭಾಗವಹಿಸುವ ಮೂಲಕ ದೇಶಪ್ರೇಮವನ್ನು ಮೆರೆಯಬೇಕು. ಎಲ್ಲರಿಗೂ ತಿರಂಗ ಧ್ವಜ ದೊರಕಬೇಕು ಎಂಬ ಉದ್ದೇಶದಿಂದ ಅಂಚೆ ಕಚೇರಿ ಮುಂದೆ ಬಂದಿದೆ. ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರು ಧ್ವಜಗಳನ್ನು ಕೊಳ್ಳಬಹುದು ಎಂದರು. 
 
ರಾಜ್ಯದ 97 ಅಂಚೆ ಕಚೇರಿಯಲ್ಲಿ ಸೆಲ್ಫಿ ಪಾಯಿಂಟ್‍ಗಳನ್ನು ಸ್ಥಾಪಿಸಲಾಗಿದೆ.  ಹ್ಯಾಶ್‍ಟ್ಯಾಗ್‍ಗಳೊಂದಿಗೆ ಇಂಡಿಯಾ ಪೋಸ್ಟ್ ಮತ್ತು ಅಮೃತ್ ಮಹೋತ್ಸವ ಹ್ಯಾಂಡಲ್‍ಗಳನ್ನು ಟ್ಯಾಗ್ ಮಾಡುವ ಮೂಲಕ ಸೆಲ್ಫಿಗಳನ್ನು ಕ್ಲಿಕ್ ಮಾಡಬಹುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಬಹುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News