ಪುತ್ರ ಕಾಂಗ್ರೆಸ್ ಸೇರ್ಪಡೆ ವಿಚಾರ: ಎಚ್. ವಿಶ್ವನಾಥ್ ಹೇಳಿದ್ದೇನು?

Update: 2022-08-10 08:01 GMT

ಬೆಂಗಳೂರು: ಪುತ್ರ ಪೂರ್ವಜ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಧಿಸಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  'ಮಕ್ಕಳಿಗೂ 40- 45 ವರ್ಷ ಆಯಿತು. ಅವರವರ ದಾರಿ ಹುಡುಕಿಕೊಂಡು ಹೋಗ್ತಾರೆ. ನನಗೆ 75 ಆಯಿತು. ಇನ್ನೂ ನಾನು ಹೇಳಿದ್ದನ್ನೇ ಕೇಳಿಕೊಂಡು ಇರಬೇಕು ಅನ್ನೋದಕ್ಕಾಗುತ್ತಾ? 75 ವರ್ಷ ಆಯಿತು ದೇಶಕ್ಕೆ ಸ್ವಾತಂತ್ರ್ಯ ಬಂತು ಇನ್ನೂ ಮಗನಿಗೆ ಸ್ವಾತಂತ್ರ್ಯ ಕೊಟ್ಟಿಲ್ಲ ಅಂದರೆ ಹೇಗೆ ?' ಎಂದು ಪ್ರಶ್ನೆ ಮಾಡಿದರು. 

ಇದನ್ನೂ ಓದಿ:  ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪುತ್ರ 

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು, 'ಅದು ಹೈಕಮಾಂಡ್ ತೀರ್ಮಾನ. ಬೊಮ್ಮಾಯಿ‌ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದಾರೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ‌. ಕಾಂಗ್ರೆಸ್‌ನವರು ಬಹಳ ಅವಸರದವರು. ದಾವಣಗೆರೆ ಸಮಾವೇಶ ಆದ ಮೇಲೆ ಜನ ಎಲ್ಲ ಡಬ್ಬಗಳನ್ನು ತುಂಬುತ್ತಾರೆ ಅನ್ನೊ ಭ್ರಮೆಯಲ್ಲಿದ್ದಾರೆ. ಎಲ್ಲರಿಗೂ ಬೈಯೋಕೆ ಶುರು ಮಾಡಿದ್ದಾರೆ' ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News